ಶಿವಮೊಗ್ಗ :  ಲೋಕಸಭಾ ಚುನಾವಣೆಗೆ ರಾಜ್ಯ ಸಜ್ಜಾಗಿದೆ. ಇನ್ನೆಂಟು ದಿನದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ನಾಯಕರ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. 

ಇತ್ತ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ನಡುವೆ ಸಖತ್ ಫೈಟ್ ನಡೆಯುತ್ತಿದ್ದು, ಇಲ್ಲಿ  ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದಿದ್ದಾರೆ. 
  
ಶಿವಮೊಗ್ಗದಲ್ಲಿ ಮಾತನಾಡಿದ  ಶಾಸಕ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಪ್ರಣಾಳಿಕೆಯಲ್ಲಿ 72 ಸಾವಿರ ಕೊಡುವುದಾಗಿ ಹೇಳಿದೆ. ಆದರೆ ಅದಿ ತಿಂಗಳಿಗೋ, ವರ್ಷಕ್ಕೆ ಎನ್ನುವುದು ಸ್ವತಃ ರಾಹುಲ್ ಗಾಂಧಿಗೂ ಗೊತ್ತಿಲ್ಲ ಎಂದಿದ್ದಾರೆ. 

 ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ 72 ಸಾವಿರ ರೂ ತಿಂಗಳಿಗೆ, ವರ್ಷಕ್ಕೊಮ್ಮೆ ಯಾವಾಗ ಕೊಡ್ತಾರೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಇನ್ನು ಸಿಎಂ ವಿರುದ್ಧವೂ ಕೂಡ ವಾಗ್ದಾಳಿ ನಡೆಸಿದ್ದು,  ಸಿಎಂ ಕುಮಾರಸ್ವಾಮಿ ಹೆಚ್ಚು ಗೊಂದಲಗಳಿಂದ ಕೂಡಿದ್ದು, ಸುಮಲತಾ ವಿರುದ್ಧ  ಅವಮಾನಕರ ಹೇಳಿಕೆ ನೀಡುತ್ತಿದ್ದಾರೆ ಎಂದರು. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.