ಕೋಲಾರ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಇದೇ ವೇಳೆ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆ ಕುತೂಹಲದಲ್ಲಿ ಜನತೆ  ಭವಿಷ್ಯ, ಜ್ಯೋತಿಷ್ಯದ ಮೊರೆ ಹೋಗಿದ್ದಾರೆ 

ಕೋಲಾರ ತಾಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ತೆಂಗಿನ ಕಾಯಿ ಕೋಲು ಶಾಸ್ತ್ರದ ಮೂಲಕ ಪ್ರಮುಖ ಕ್ಷೇತ್ರಗಳ ಚುನಾವಣಾ ಭವಿಷ್ಯ ನೋಡಲಾಗಿದೆ. 

ಹಾನಸ, ತುಮಕೂರು, ಮಂಡ್ಯ, ಕೋಲಾರದ ಬಗ್ಗೆ ತೆಂಗಿನ ಕಾಯಿ ಶಾಸ್ತ್ರ ನೋಡಿದ್ದು, ಇಲ್ಲಿನ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆ ತಿಳಿಯುತ್ತಿದ್ದಾರೆ. 

ತೆಂಗಿನ ಕಾಯಿ ಕೋಲು ಶಾಸ್ತ್ರವು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಗೆಲುವು ಖಚಿತ ಎಂದು  ಭವಿಷ್ಯ ನುಡಿದಿದೆ. ಇತ್ತ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ದೇವೇಗೌಡರು ಸೋಲಲಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದೆ. 
 
ಗೆಲುವು ಪಡೆಯುವುದಾದಲ್ಲಿ ತೆಂಗಿನಕಾಯಿ ಗಿರಗಿರನೆ ತಿರುಗುವ ಮೂಲಕ ಚುನಾವಣಾ ಭವಿಷ್ಯ ತಿಳಿಸಿದೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.