ಚಾಮರಾಜನಗರ : ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಕ್ತಾಯವಾಗಿದ್ದು, ಮುಖಂಡರು ಫಲಿತಾಂಶಕ್ಕೆ ಕಾತರರಾಗಿದ್ದಾರೆ. ಇದೇ ವೇಳೆ ಹಲವು ರೀತಿಯ ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಾಗುತ್ತಿವೆ. 

ಇತ್ತ ಚಾಮರಾಜನಗರದಲ್ಲಿ ಮೈತ್ರಿ ಅಭ್ಯರ್ಥಿಗೆ ದೋಸ್ತಿಗಳೇ ವಿರೋಧಿಗಳಾಗಿದ್ದರಾ ಎನ್ನುವ ವಿಚಾರ ಚರ್ಚೆಗೆ ಕಾರಣವಾಗಿದೆ. 

ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ  ಜೆಡಿಎಸ್ ಮುಖಂಡ ಹೇಳಿದ್ದಾರೆಂಬ ಆಡಿಯೋ ವೈರಲ್ ಆಗಿದ್ದು, ಪ್ರತಿ ಬೂತ್ ಗೆ 25 ಸಾವಿರ ರು. ಹಣ ನೀಡಿ ಬಿಜೆಪಿಗೆ ಮತ ಹಾಕುವಂತೆ  ಹೇಳಿದ್ದಾರೆ ಎನ್ನಲಾಗಿದೆ. 

ಚಾಮರಾಜನಗರ ಜಿಲ್ಲೆ ಹನೂರಿನ‌ ಜೆಡಿಎಸ್ ಮುಖಂಡ ಮಂಜುನಾಥ್ ಎನ್ನುವವರು ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದಾರೆ ಎನ್ನಲಾಗುತ್ತಿದ್ದು, ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ನಿಂತಿದ್ದರು ಎನ್ನಲಾಗುತ್ತಿದೆ. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದ ಮಂಜುನಾಥ್ ಇದೀಗ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಹೇಳಿದ್ದಾರೆನ್ನಲಾಗಿದೆ. 

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ವಿರುದ್ದ ಕೆಲಸ ಮಾಡಿದರಾ ಜೆಡಿಎಸ್ ಮುಖಂಡ ಎನ್ನುವ ಅನುಮಾನ ಹುಟ್ಟುಹಾಕಿದೆ.