ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಇವಿಧ  ಪಕ್ಷಗಳ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಅಲ್ಲದೇ ಎಲ್ಲೆಡೆ ಬಿರುಸಿನ ಪ್ರಚಾರ ಕಾರ್ಯ ನಡೆಸುತ್ತಿವೆ. ಇದೀಗ ಸಮೀಕ್ಷೆಯೊಂದು ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಎಂದು ಹೇಳಿದೆ. 

ಜೆಡಿಎಸ್+ಕಾಂಗ್ರೆಸ್ ಮೈತ್ರಿಯ ಹೊರತಾಗಿಯೂ ಬಿಜೆಪಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಜಯಿಸಲಿದೆ ಎಂದು ‘ಇಂಡಿಯಾ ಟೀವಿ-ಸಿಎನ್‌ಎಕ್ಸ್’ ಸಮೀಕ್ಷೆ ಹೇಳಿದೆ. 

ಕರ್ನಾಟಕ ದಲ್ಲಿ ಬಿಜೆಪಿ 16, ಕಾಂಗ್ರೆಸ್ 10, ಜೆಡಿಎಸ್ 2 ಸ್ಥಾನ ಪಡೆಯ ಲಿವೆ. ಬಿಜೆಪಿಗೆ ಕಳೆದ ಸಲಕ್ಕಿಂತ 1 ಸ್ಥಾನ ಕಡಿಮೆ ಬರಲಿದೆ. ಕಾಂಗ್ರೆಸ್ 1 ಸ್ಥಾನ ಹೆಚ್ಚು ಗೆಲ್ಲಲಿದ್ದರೆ, ಜೆಡಿಎಸ್ ಬಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸಮೀಕ್ಷೆ ಭವಿಷ್ಯ ಹೇಳಿದೆ.