ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಪೀಕಲಾಟ ಎದುರಾಗಿದೆ. 

ಕೋಲಾರ
ಹಾಲಿ ಸಂಸದ ಮುನಿಯಪ್ಪ ಗೆ ಕೋಲಾರ ಟಿಕೆಟ್ ನೀಡಬಾರದು. ಇವರ ಬದಲು ಖರ್ಗೆ ಇಲ್ಲಿಂದ ಸ್ಪರ್ಧಿಸಲಿ. ಮುನಿಯಪ್ಪಗೆ ಚಿತ್ರದುರ್ಗ ಟಿಕೆಟ್ ನೀಡಿ ಎಂದು ಸ್ಪೀಕರ್ ರಮೇಶ್‌ಕುಮಾರ್ ಮತ್ತಿತರ ಕಾಂಗ್ರೆಸಿಗರು ಹೈಕಮಾಂಡ್ ಮೊರೆ ಹೋಗಿದ್ದಾರೆ.

ಬೆಳಗಾವಿ
ಸಚಿವ ಸತೀಶ್ ಜಾರಕಿಹೊಳಿ ಅವರು ಹಾಲಿ ಶಾಸಕಿ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್ ಕೊಡಬೇಕು ಎಂದು ಲಾಬಿ ನಡೆಸಿದ್ದರೆ, ಬಂಡಾಯ ಕಾಂಗ್ರೆಸ್‌ನ ನೇತೃತ್ವದ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರು ವಿವೇಕರಾವ್ ಪಾಟೀಲ್ ಪರ ಲಾಬಿ ನಡೆಸಿದ್ದಾರೆ.

ಮಂಗಳೂರು
ರಮಾನಾಥ್ ರೈ ಕಣಕ್ಕಳಿಸಲು ಸಿದ್ದರಾಮಯ್ಯಗೆ ಒಲವು. ಆದರೆ ಬಿ.ಕೆ. ಹರಿಪ್ರಸಾದ್ ಕೂಡ ತೀವ್ರ ಪ್ರಯತ್ನ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಆಕಾಂಕ್ಷಿ. ಯಾರಿಗೆ ಟಿಕೆಟ್ ಕೊಟ್ಟರೂ ಇನ್ನೊಬ್ಬರು ಬಂಡೇಳುವ ಸಾಧ್ಯತೆ ಇದೆ.

ಬಾಗಲಕೋಟೆ
ಬಾಗಲಕೋಟೆ ಟಿಕೆಟ್ ವೀಣಾ ಕಾಶಪ್ಪನವರ್‌ಗೆ ನೀಡಬೇಕೆಂಬುದು ಸಿದ್ದರಾಮಯ್ಯ ವಾದ. ಶಿವಾ ನಂದ ಪಾಟೀಲ್ ಮತ್ತಿತರರು ಮಹಾಂತೇಶ್ ಉದು ಪುಡಿ ಪರ ಲಾಬಿ ನಡೆಸಿದ್ದಾರೆ. ಹೀಗಾಗಿ ಎಲ್ಲರ ಸಂತೈಸುವ ಹೊಣೆ ಸಿದ್ದರಾಮಯ್ಯಗೆ ನೀಡಲಾಗಿದೆ.

ಬೆಂಗಳೂರು ಸೆಂಟ್ರಲ್
೩ಮುಸ್ಲಿಂ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಇಲ್ಲಿ ತಲೆನೋವಾಗಿದೆ. ರಿಜ್ವಾನ್ ಅರ್ಷದ್ ಪರ ದಿನೇಶ್ ಲಾಬಿ ಮಾಡುತ್ತಿದ್ದಾರೆ. ರೋಷನ್, ನಸೀರ್ ಅಹ್ಮದ್, ಸಾಂಗ್ಲಿಯಾನಾ ಕೂಡ ಆಕಾಂಕ್ಷಿ. ರಿಜ್ವಾನ್ ಗೆ ಟಿಕೆಟ್ ಸಿಕ್ಕರೆ ಉಳಿದವರು ಬಂಡೇಳಬಹುದು.

ಬೀದರ್
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಖರ್ಗೆ ಹಾಗೂ ವೇಣು ಅವರು ಖಂಡ್ರೆ ಸ್ಪರ್ಧೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಆದರೆ, ದಿನೇಶ್ ಗುಂಡೂರಾವ್ ಅವರು ಧರ್ಮಸಿಂಗ್ ಅವರ ಪುತ್ರ ವಿಜಯಸಿಂಗ್ ಪರ ಲಾಬಿ ನಡೆಸಿದ್ದಾರೆ.


ಬೆಂಗಳೂರು ದಕ್ಷಿಣ 
ಮಾಜಿ ಶಾಸಕ ಪ್ರಿಯಕೃಷ್ಣರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಬಯಸಿತ್ತು. ಆದರೆ, ಅವರು ರಾಮಲಿಂಗಾರೆಡ್ಡಿ ಅವರು ಬೆಂಬಲ ನೀಡಿದರೆ ಮಾತ್ರ ಸ್ಪರ್ಧೆ ಎಂದಿದ್ದರು. ಕಡೆಗೆ ರೆಡ್ಡಿ ಬೆಂಬಲ ಬಗ್ಗೆ ಅನುಮಾನ ಗೊಂಡು ಸ್ಪರ್ಧಿಗೆ ನಿರಾಕರಿಸಿ
ದರು. ಕಣಕ್ಕಿಳಿಯಲು ರೆಡ್ಡಿ ಕೂಡ ಒಲ್ಲೆ ಎಂದಿದ್ದಾರೆ.

ದಾವಣಗೆರೆ
ಇಲ್ಲಿನ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಹಿರಿನಾಯಕ ಶಾಮನೂರು ಶಿವಶಂಕರಪ್ಪಗೆ ನೀಡಲಾಗಿದೆ. ಶಾಮನೂರು ಮಗ ಮಲ್ಲಿಕಾರ್ಜುನ ಅಥವಾ ಸೊಸೆ ಪ್ರಭಾ ಮಲ್ಲಿಕಾರ್ಜುನ ಸ್ಪರ್ಧಿಸಲಿ ಎಂಬ ಬಯಕೆ ಕಾಂಗ್ರೆಸ್‌ಗೆ ಇದೆ. ಆದರೆ ಯಾರು ಸ್ಪರ್ಧಿಸುತ್ತಾರೆ ಎಂಬ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

3 ಕಾಂಗ್ರೆಸ್‌ನ ಬಿಸಿತುಪ್ಪಗಳು
ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿ, ಎ.ಮಂಜು, ಕೆ.ಎನ್.ರಾಜಣ್ಣ ಅವರು ಕಾಂಗ್ರೆಸ್ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಾ ಪಕ್ಷಕ್ಕೆ ಬಿಸಿ ತುಪ್ಪ ವಾಗಿ ಪರಿಣಮಿಸಿದ್ದಾರೆ. ಪೂಜಾರಿ ಯವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸು ತ್ತೇನೆ ಎಂದಿ
ದ್ದಲ್ಲದೆ ಮೋದಿಯವರನ್ನು ಹೊಗಳಿ ದ್ದಾರೆ. ಇನ್ನು ರಾಜಣ್ಣ ಅವರು ತುಮಕೂರು ಬಿಟ್ಟುಕೊಟ್ಟಿದ್ದಕ್ಕೆ ಗೌಡರನ್ನುತೆಗಳಿದ್ದಾರೆ.ಪ್ರಜ್ವಲ್ ಸ್ಪರ್ಧೆಗೆ ವಿರೋಧಿಸಿ ರುವ ಮಂಜು, ಬಿಜೆಪಿ ಪರ ಒಲವು ತೋರಿದ್ದಾರೆ.