ಲೆಹ್(ಮೇ.05): ಲೋಕಸಭೆ ಚುನವಣೆಯಲ್ಲಿ ಪಕ್ಷದ ಪರ ವರದಿ ಮಾಡುವಂತೆ ಬಿಜೆಪಿ ನಮಗೆ ಆಮೀಷವೊಡ್ಡುತ್ತಿದೆ ಎಂದು ಲೆಹ್ ಪತ್ರಕರ್ತರ ಸಂಘ ಆರೋಪಿಸಿದೆ.

ಈ ಕುರಿತು ಚುನವಣಾ ಆಯೋಗಕ್ಕೆ ಲಿಖಿತ ದೂರು ನೀಡಿರುವ ಪತ್ರಕರ್ತರ ಸಂಘ, ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರಾಣಾ ಅವರ ಮೇಲೆ ಆರೋಪ ಹೊರಿಸಿದೆ.

ಇಲ್ಲಿನ ಹೊಟೇಲ್ ಸಿಂಗೆ ಪ್ಯಾಲೆಸ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ವೇಳೆ ರವೀಂದ್ರ ರಾಣಾ ನಮ್ಮನ್ನು ಖರೀದಿಸಲು ಯತ್ನಿಸಿದರು ಎಂದು ಪತ್ರಕರ್ತರ ಸಂಘ ದೂರಿನಲ್ಲಿ ಉಲ್ಲೇಖಿಸಿದೆ.

ಇನ್ನು ಲೆಹ್ ಪತ್ರಕರ್ತರ ಸಂಘದ ದೂರು ಸ್ವೀಕರಿಸಿರುವ ಚುನವಣಾ ಆಯೋಗ, ತನಿಖೆಗೆ ಆದೇಶ ನೀಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ