ಪ್ರಧಾನಿ ಮೋದಿ ಕುರಿತು ಲಾಲೂ ಡಬ್ ಸ್ಮ್ಯಾಶ್ ಕೇಳಿಲ್ವಾ?| ಅಚ್ಛೇದಿನ್ ಡಬ್ ಸ್ಮ್ಯಾಶ್ ಮಾಡಿದ ಲಾಲೂ| ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ| ಅಚ್ಚೇದಿನ್ ಅಂದರೆ ಜುಮ್ಲಾ ಎಂದು ಲೇವಡಿ ಮಾಡಿದ ಲಾಲೂ|

ಪಾಟ್ನಾ(ಏ.14): ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಪ್ರಧಾನಿ ಮೋದಿ ಅವರ 'ಅಚ್ಛೇದಿನ್' ಕುರಿತು ಡಬ್ ಸ್ಮ್ಯಾಶ್ ಮಾಡಿ ಲೇವಡಿ ಮಾಡಿದ್ದಾರೆ.

2014ರ ಲೋಕಸಭೆ ಚುನಾವಣಣೆ ವೇಳೆ ಮೋದಿ ಮಾಡಿದ್ದ ಭಾಷಣಕ್ಕೆ ಡಬ್ ಸ್ಮ್ಯಾಶ್ ಮಾಡಿರುವ ಲಾಲೂ, ಕೊನೆಯಲ್ಲಿ ಅಚ್ಛೇದಿನ್ ಅಂದರೆ ಜುಮ್ಲಾ ಎಂದು ಹೇಳುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

Scroll to load tweet…

ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿ ನೀಡಿದ್ದ ಭರವಸೆಯನ್ನೂ ಕುಹುಕವಾಡಿರುವ ಲಾಲೂ, ದೇಶದ ಜನ 15 ಲಕ್ಷ ರೂ. ಎಲ್ಲಿದೆ ಎಂದು ಕೇಳುತ್ತಿದ್ದಾರೆ ಎಂದು ವಿಡಿಯೋ ಮಾಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.