Asianet Suvarna News Asianet Suvarna News

ಹಾಲಿ ಎಂಪಿಗಳ ಟಿಕೆಟ್ ಅಪಸ್ವರ : ಇಲ್ಲಿದೆ ಬಿಜೆಪಿ ಸಂಭಾವ್ಯರ ಪಟ್ಟಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿಗಳ ಘೋಷಣೆಗೂ ಕೂಡ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಸಂಭ್ಯಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ. 

Karnataka probable Candidate List in BJP For Loksabha Elections 2019
Author
Bengaluru, First Published Mar 18, 2019, 8:14 AM IST

ಬೆಂಗಳೂರು :  ಹಾಲಿ ಬಿಜೆಪಿ ಸಂಸದರು ಪ್ರತಿನಿಧಿಸುತ್ತಿರುವ ಉಡುಪಿ ಚಿಕ್ಕಮಗಳೂರು ಮತ್ತು  ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳು ಸೇರಿದಂತೆ ಇತರ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಒಮ್ಮತಾ ಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದು, ಸೋಮವಾರ ಅಥವಾ ಮಂಗಳವಾರ ಪಕ್ಷದ ವರಿಷ್ಠ ರೊಂದಿಗೆ ಚರ್ಚಿಸಿದ ನಂತರ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಮಂಗಳವಾರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುವ ಸಂಭವ ದಟ್ಟವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಭಾನುವಾರ ಮಧ್ಯಾಹ್ನ ಪಕ್ಷದ ಕಚೇರಿ ಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆದು ಸುದೀರ್ಘವಾಗಿ ಸಮಾಲೋಚನೆ ನಡೆಸ ಲಾಯಿತು. ಈ ಮೊದಲು ಅಭ್ಯರ್ಥಿಗಳ  ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಶಿಫಾರಸು ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಲು ಉದ್ದೇಶಿಸಲಾಗಿತು

ಆದರೆ, ಕೆಲವು ಕ್ಷೇತ್ರಗಳಲ್ಲಿ ಒಮ್ಮತದ ಅಭಿಪ್ರಾಯ ಮೂಡದಿರುವುದರಿಂದ ವರಿಷ್ಠರ ಗಮನಕ್ಕೆ ತರಲಾಯಿತು. ನಂತರ ವರಿಷ್ಠರ ಬುಲಾವ್ ಮೇರೆಗೆ ರಾಜ್ಯ ಘಟಕದ ಹಿರಿಯ ನಾಯಕರು ಸಂಜೆಯೇ ದೆಹಲಿಗೆ ತೆರಳಿದರು. ಯಡಿಯೂರಪ್ಪ, ಮಾಜಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿರುವ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಕೆ.ಎಸ್.ಈಶ್ವರಪ್ಪ ಹಾಗೂ ಪ್ರಹ್ಲಾದ್ ಜೋಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಅವರು ದೆಹಲಿಗೆ ತೆರಳಿದ ನಾಯಕರು. ಕರಾವಳಿ ಭಾಗದ ಹಾಲಿ ಪಕ್ಷದ ಸಂಸದರಿರುವ ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಕ್ಷೇತ್ರಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದ್ದು, ಸಾಧನೆ ಮತ್ತು ಕಾರ್ಯವೈಖರಿ ಮಾನದಂಡದ
ಹಿನ್ನೆಲೆಯಲ್ಲಿ ಇಬ್ಬರೂ ಸದಸ್ಯರನ್ನು ಬದಲಾಯಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವು ನಾಯಕರು ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದ್ದು, ಇದರ ಮಧ್ಯೆಯೂ ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ಸಿಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಹಾಲಿ ಸಂಸದರಾಗಿರುವ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶೋಭಾ ಕರಂದ್ಲಾಜೆ ಅವರ ಬಗ್ಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಂದ ವಿರೋಧವಿದೆ. ಅವರ ಬದಲು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಹೆಸರನ್ನು ಕೆಲವು ನಾಯಕರು ಪ್ರಸ್ತಾಪಿಸಿದರು.

ಜಯಪ್ರಕಾಶ್ ಹೆಗ್ಡೆ ಅವರನ್ನು ಸೆಳೆಯಲು ಜೆಡಿಎಸ್ ತೀವ್ರ ಪ್ರಯತ್ನ ನಡೆಸಿದೆ. ಒಂದು ವೇಳೆ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು. ಆಗ ಬಿಜೆಪಿಗೆ ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ. ಅದೇ ರೀತಿ ಉತ್ತರ ಕನ್ನಡ ಕ್ಷೇತ್ರದಿಂದ ಹಾಲಿ ಕೇಂದ್ರ ಸಚಿವರೂ ಆಗಿರುವ ಅನಂತಕುಮಾರ್ ಹೆಗಡೆ ಅವರ ಬಗ್ಗೆಯೂ ಅಪಸ್ವರ ಕೇಳಿಬಂದಿರುವುದರಿಂದ ಅವರ ಬದಲು ಆ ಕ್ಷೇತ್ರದಲ್ಲಿನ ಖ್ಯಾತ ವೈದ್ಯ ಡಾ.ಜಿ.ಜಿ.ಹೆಗಡೆ ಅವರನ್ನು ಕಣಕ್ಕಿಳಿಸಬಹುದು ಎಂಬ ಪ್ರಸ್ತಾಪ ಬಂತು ಎಂದು ವಿಶ್ವಸನೀಯ ಮೂಲಗಳು ತಿಳಿಸಿ

ಬೀದರ್ - ಭಗವಂತ ಖೂಬಾ 

ಕಲಬುರಗಿ - ಡಾ.ಉಮೇಶ್ ಜಾಧವ್ 

ರಾಯಚೂರು ಅಮರೇಶ್ ನಾಯಕ್/ 
ತಿಪ್ಪರಾಜು ಹವಾಲ್ದಾರ್

ಬಳ್ಳಾರಿ-ದೇವೇಂದ್ರಪ್ಪ/ ವೆಂಕಟೇಶ್
ಪ್ರಸಾದ್

ಕೊಪ್ಪಳ - ಸಂಗಣ್ಣ ಕರಡಿ

ವಿಜಯಪುರ - ರಮೇಶ್ ಜಿಗಜಿಣಗಿ

ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್

ಚಿಕ್ಕೋಡಿ - ರಮೇಶ್ ಕತ್ತಿ

ಬೆಳಗಾವಿ - ಸುರೇಶ್ ಅಂಗಡಿ

ಧಾರವಾಡ - ಪ್ರಹ್ಲಾದ್ ಜೋಶಿ

ಉತ್ತರ ಕನ್ನಡ - ಅನಂತಕುಮಾರ್ ಹೆಗಡೆ/
ಡಾ.ಜಿ.ಜಿ.ಹೆಗಡೆ

ಹಾವೇರಿ - ಶಿವಕುಮಾರ್ ಉದಾಸಿ

ದಾವಣಗೆರೆ - ಜಿ.ಎಂ.ಸಿದ್ದೇಶ್ವರ್

ಚಿತ್ರದುರ್ಗ - ಎ.ನಾರಾಯಣಸ್ವಾಮಿ/
ಲಕ್ಷ್ಮೀನಾರಾಯಣ/ ವಜ್ಜಲ್

ಶಿವಮೊಗ್ಗ - ಬಿ.ವೈ.ರಾಘವೇಂದ್ರ

ದಕ್ಷಿಣ ಕನ್ನಡ  - ನಳಿನ್‌ಕುಮಾರ್ ಕಟೀಲು

ಉಡುಪಿ-ಚಿಕ್ಕಮಗಳೂರು
ಶೋಭಾ ಕರಂದ್ಲಾಜೆ/ ಜಯಪ್ರಕಾಶ್ ಹೆಗ್ಡೆ

ತುಮಕೂರು ಜಿ.ಎಸ್.ಬಸವರಾಜು/ ಸುರೇಶ್‌ಗೌಡ

ಹಾಸನ ಎ.ಮಂಜು

ಮೈಸೂರು ಪ್ರತಾಪ್ ಸಿಂಹ

ಚಾಮರಾಜನಗರ ವಿ.ಶ್ರೀನಿವಾಸ್ ಪ್ರಸಾದ್

ಮಂಡ್ಯ ಸಿದ್ರಾಮಯ್ಯ (ಸುಮಲತಾ
ನಡೆ ಮೇಲೆ ಅವಲಂಬಿತ)

ಬೆಂ.ಗ್ರಾಮಾಂತರ ಸಿ.ಪಿ.ಯೋಗೇಶ್ವರ್

ಬೆಂಗಳೂರು - ದಕ್ಷಿಣ ತೇಜಸ್ವಿನಿ ಅನಂತಕುಮಾರ್

ಬೆಂಗಳೂರು
ಉತ್ತರ ಡಿ.ವಿ.ಸದಾನಂದಗೌಡ

ಬೆಂಗಳೂರು
ಕೇಂದ್ರ ಪಿ.ಸಿ.ಮೋಹನ್

ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ

ಕೋಲಾರ ಡಿ.ಎಸ್.ವೀರಯ್ಯ/
ಛಲವಾದಿ ನಾರಾಯಣಸ್ವಾಮಿ

Follow Us:
Download App:
  • android
  • ios