ಕೋಲಾರ  :  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೆ ವಿವಿಧ ಪಕ್ಷಗಳಲ್ಲಿ ಕ್ಷಣಗಣನೆ ಆರಂಭವಾಗಿದೆ. 

ಆದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ವಿಚಾರದಲ್ಲಿ ಇದೀಗ ಫೈಟ್ ಆರಂಭವಾಗಿದೆ.  ಕೋಲಾರದಿಂದ KH ಮುನಿಯಪ್ಪಗೆ ಟಿಕೆಟ್ ನೀಡದಂತೆ ಹಲವು ನಾಯಕರು ವಿರೋಧಿಸಿದ್ದು, ಈ ನಿಟ್ಟಿನಲ್ಲಿ ದೆಹಲಿಗೆ ತೆರಳಿದ್ದ ನಿಯೋಗಕ್ಕೆ ಶಾಕ್ ಎದುರಾಗಿದೆ.  

ಕೆ.ಹೆಚ್ ಮುನಿಯಪ್ಪ ವಿರೋಧಿ ನಿಯೋಗಕ್ಕೆ ಶಾಕ್ ನೀಡಲು ಮತ್ತೊಂದು ತಂಡ‌ ದೆಹಲಿಗೆ ತೆರಳಿದೆ.   ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ನೇತೃತ್ವದಲ್ಲಿ 17 ಶಾಸಕ ತಂಡ ಕೆ.ಹೆಚ್ ಮುನಿಯಪ್ಪ ಪರ ಬ್ಯಾಟಿಂಗ್ ಮಾಡಲು ದೆಹಲಿ ತಲುಪಿದೆ. 

ಕೋಲಾರ ಲೋಕಸಭಾ ಕ್ಷೇತ್ರದಿಂದ ಐದು ಶಾಸಕರ ಬೆಂಬಲದೊಂದಿಗೆ ಇತರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳು, ಬ್ಲಾಕ್ ಕಾಂಗ್ರೆಸ್, ಕೆಪಿಸಿಸಿ ಸದಸ್ಯರು ಹಾಗೂ ಕಾರ್ಯದರ್ಶಿಗಳು ಸೇರಿದಮತೆ ಹಲವು ಹಿರಿಯ ಮುಖಂಡರರು ತೆರಳಿದ್ದಾರೆ. 

ಕೆ.ಹೆಚ್ ಮುನಿಯಪ್ಪ ಪರ ಉಪ ಸಭಾಧ್ಯಕ್ಷ ಚಿಂತಾಮಣಿ ಶಾಸಕ  ಜೆಡಿಎಸ್ ಕೃಷ್ಣಾರೆಡ್ಡಿ, ಬಾಗೇಪಲ್ಲಿ ಎಸ್ .ಎನ್ ಸುಬ್ಬರೆಡ್ಡಿ, ಕೆಜಿಎಫ್ ರೂಪಕಲಾ, ಮಾಲೂರು ಶಾಸಕ‌ ಕೆ.ವೈ. ನಂಜೇಗೌಡ ಸೇರಿದ‌ ನೀಯೋಗ ದೆಹಲಿಯಲ್ಲಿ ಬೀಡು ಬಿಟ್ಟಿದೆ.