ಚಿಕ್ಕಮಗಳೂರು-ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರದ ಭಾಷಣದ ವೇಳೆ‌ ಎಡವಟ್ಟು ಮಾಡಿಕೊಂಡಿಕೊಂಡಿದ್ದ ಸಿಟಿ ರವಿ ವಿರುದ್ಧ ಸಚಿವೆ ಜಯಮಾಲಾ ಗುಡುಗಿದ್ದಾರೆ. 

ಚಿಕ್ಕಮಗಳೂರು, [ಏ.16]: ಚಿಕ್ಕಮಗಳೂರು-ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರದ ಭಾಷಣದ ವೇಳೆ ಬಿಜೆಪಿಗೆ ಮತ ಹಾಕದವರು ತಾಯಿಗಂಡರು ಎಂದು ಸಿ.ಟಿ ರವಿ ಹೇಳಿರುವುದನ್ನು ಜಯಮಾಲಾ ಖಂಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೀಳು ರಾಜಕಾರಣಿ ಬಾಯಲ್ಲಿ ಹೊಲಸು ಮಾತು ಬಂದಿದೆ. ಮಹಿಳೆಯರನ್ನು ತುಚ್ಛವಾಗಿ ಕಾಣೋದೆ ಇವರ ಸಂಸ್ಕೃತಿ. ಈ ವ್ಯಕ್ತಿ ನಾಲಿಗೆಯನ್ನೆ ಚಪ್ಪಲಿ ಮಾಡಿದ್ದಾರೆ. ತಾಯಿ ಮೌಲ್ಯದ ನೀತಿಪಾಠವುಳ್ಳ ‘ನಮ್ಮವ್ವ ಅಂದ್ರೆ ನಂಗಿಷ್ಟ’, ‘ಅಮ್ಮ ಹೇಳಿದ 8ಸುಳ್ಳುಗಳು‘ ಪುಸ್ತಕಗಳನ್ನು ಅವರಿಗೆ ಕೊರಿಯರ್ ಮಾಡುತ್ತೇನೆ ಎಂದು ಜಯಮಾಲಾ ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ಸಿಟಿ ರವಿ

ಮಹಿಳಾ ಆಯೋಗಕ್ಕೂ ದೂರು ನೀಡ್ತೀವಿ ಎಂದು ಜಯಮಾಲಾ ಎಚ್ಚರಿಸಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಕಣದಲ್ಲಿದ್ದರೆ ದೋಸ್ತಿ ಪಡೆಯಿಂದ ಪ್ರಮೋದ್ ಮಧ್ವರಾಜ್ ಅಖಾಡದಲ್ಲಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.