ಹಾಸನ, (ಏ.4): ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೂತನ ಎಸ್ಪಿಯಾಗಿ ಡಾ.ಚೇತನ್ ಸಿಂಗ್ ರಾಥೋಡ್ ಅವರನ್ನು ನಿಯೋಜಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಪಾತದ ಆರೋಪದ ಮೇಲೆ ಎಸ್ಪಿ ಪ್ರಕಾಶ್ ವರ್ಗಾವಣೆಗೆ ಬಿಜೆಪಿ ಆಗ್ರಹಿಸಿತ್ತು. 

BJP ಪ್ಲಾನ್ ಸಕ್ಸಸ್: ಚುನಾವಣೆ ಹೊಸ್ತಿಲಲ್ಲಿ ಹಾಸನ DC ದಿಢೀರ್ ಎತ್ತಂಗಡಿ

ಈ ಬಗ್ಗೆ ರಾಜ್ಯ ಚುನಾವಣಾಧಿಕಾರಿಗಳಿಗೂ ಸಹ ದೂರು ನೀಡಿತ್ತು.ಇದರ ಅನ್ವಯ ಚುನಾವಣಾ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ರೂ ಪ್ರಕಾಶ್ ಗೌಡ ಅವರನ್ನ ವರ್ಗಾವಣೆ ಮಾಡಲು ಡಿಜಿ ಹಿಂದೇಟು ಹಾಕಿದ್ದರು. 

ಈ ಬಗ್ಗೆ ಸುವರ್ಣನ್ಯೂಸ್ ಇಂದು (ಗುರುವಾರ) ಬೆಳಗ್ಗೆಯಷ್ಟೇ ಸುದ್ದಿ ಪ್ರಸಾರ ಮಾಡಿತ್ತು. ಇದ್ರಿಂದ ಎಚ್ಚೆತ್ತ ಡಿಜಿ, ಪ್ರಕಾಶ್ ಅವರ ವರ್ಗಾವಣೆಗೆ ಸಮ್ಮತಿ ಸೂಚಿಸಿದ್ದಾರೆ. 

 ಪ್ರಕಾಶ್ ಮೇಲೆ ಹಲವು ಆರೋಪ
ಹೌದು... ಪ್ರಕಾಶ್ ಗೌಡ ಅವರ ವಿರುದ್ಧ ಹಲವು ಆರೋಪಗಳಿವೆ. 2018 ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಅಕ್ರಮ ಹಣ ಸಂಗ್ರಹದ ಮೇಲೆ ದಾಳಿ ಮಾಡುವಂತೆ ಅಂದಿನ ಜಿಲ್ಲಾಧಿಕಾರಿ ಸೂಚಿಸಿದ್ದರು. 

ಆದ್ರೆ ಪ್ರಕಾಶ್ ದಾಳಿ ನಡೆಸಲು ನಿರಾಕರಿಸುವ ಮೂಲಕ ಜಿಲ್ಲಾಧಿಕಾರಿ ಆದೇಶವನ್ನು ಧಿಕ್ಕರಿಸಿದ್ದರು. ಇದ್ರಿಂದ ಅಮಾನತು ಕೂಡ ಆಗಿದ್ದರು.

ಮೊನ್ನೇ ಅಷ್ಟೇ ಬಿಜೆಪಿ ಶಾಸಕ ಪ್ರೀತಂ ಗೌಡ ದೂರಿನ ಮೇರೆಗೆ ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನು ವರ್ಗಾವಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.