ಬೆಂಗಳೂರು, [ಏ.11]: 'ತಮ್ಮ ಮಗನಿಗೆ ಲೋಕಸಭಾ ಚುನಾವಣಾ ಟಿಕೆಟ್ ಕೊಡಿಸುವಲ್ಲಿ ತೋರಿಸಿದ ಉತ್ಸಾಹವನ್ನು, ದೇಶ ಕಾಯಲು ಆತನನ್ನು ಸೈನ್ಯಕ್ಕೆ ಕಳುಹಿಸುವಲ್ಲಿ ಯಾಕೆ ತೋರಿಸಲಿಲ್ಲ' ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮೂಲಕ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದೆ.

'ಸೈನ್ಯಕ್ಕೆ ಸೇರುವವರು ಬಡಕುಟುಂಬದ ಯುವಕರೇ ಹೊರತು ಶ್ರೀಮಂತರ ಮನೆ ಮಕ್ಕಳಲ್ಲ' ಬದಲಾಗಿ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲ, ಕೆಲಸವಿಲ್ಲ ಎನ್ನುವವರು ಸೈನ್ಯಕ್ಕೆ ಹೋಗಿ ಸೇರುತ್ತಾರೆ' ಎಂದು ಸಿಎಂ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು. 

ಐಟಿ ದಾಳಿ ನಡೆಯುತ್ತೆ ಎಂದು ಹೇಳಿದ್ದ ಕುಮಾರಸ್ವಾಮಿಯಿಂದ ಮತ್ತೊಂದು ಬಾಂಬ್

ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಕರ್ನಾಟಕ ಬಿಜೆಪಿ, ''ಮಾನ್ಯ ಕುಮಾರಣ್ಣ ಅವರೇ, ಊಟಕ್ಕೆ ಗತಿಯಿಲ್ಲದ ಯುವಕರು ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿರುವ ನಿಮಗೆ ನಾಚಿಕೆಯಾಗಬೇಕು.  ಯುವಕರು ದೇಶಭಕ್ತಿಯಿಂದ ಸೈನ್ಯಕ್ಕೆ ಸೇರುತ್ತಾರೆಯೇ ಹೊರತು ಯಾವುದೇ ಆಸೆ, ಆಮಿಷಗಳಿಂದಲ್ಲ. ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ ನಿಮ್ಮನ್ನು ನಾಡಿನ ಜನತೆ ಕ್ಷಮಿಸಲಾರರು'' ಎಂದು ಬಿಜೆಪಿ ಕರ್ನಾಟಕ ಟ್ವಿಟರ್ ಮೂಲಕ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇಲ್ಲಿ ಒಂದು ಗಮನಿಸಬೇಕಾದ ಅಂಶ ಅಂದ್ರೆ ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದು ಅವರಿಗೆ ಗೊತ್ತು.