ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ದಿ. ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿ ಹೊಸ ಹುದ್ದೆಯನ್ನು ನೀಡಿದೆ.

ಬೆಂಗಳೂರು, (ಏ.02): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ತೇಜಸ್ವಿನಿ ಅನಂತ್​ಕುಮಾರ್​​ ಅವರನ್ನ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ.

"

Scroll to load tweet…

ಈ ಬಗ್ಗೆ ಅಧಿಕೃತವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ತೇಜಸ್ವಿನಿ ಅನಂತ್​ಕುಮಾರ್​ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಲು ನನಗೆ ಸಂತೋಷವಾಗ್ತಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ ಎಂದು ಯಡಿಯೂರಪ್ಪ ಬರೆದುಕೊಂಡಿದ್ದಾರೆ.

ಮೊದಲಿಗೆ ಬೆಂಗಳೂರು ದಕ್ಷಿಣ ಟಿಕೆಟ್ ತೇಜಸ್ವಿನಿ ಅವರಿಗೆ ಅಂತಿಮವಾಗಿತ್ತು.ಇನ್ನೇನು ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ ಉಳಿದಿತ್ತು. ಆದ್ರೆ ಕೊನೆಗಳಿಗೆಯಲ್ಲಿ ಬದಲಾದ ರಾಜಕೀಯ ಬೆಳವಣಿಗೆಯಿಂದ ಟಿಕೆಟ್ ಕೈತಪ್ಪಿದ್ದು, ಯುವಕ ತೇಜಸ್ವಿ ಸೂರ್ಯ ಅವರಿಗೆ ಮಣೆ ಹಾಕಲಾಗಿದೆ.

ಇದ್ರಿಂದ ತೇಜಸ್ವಿನಿ ಅಸಮಾಧಾನಗೊಂಡಿದ್ದರು. ಈ ಅಸಮಾಧಾನವನ್ನು ಶಮನ ಮಾಡಲು ಬಿಎಸ್‌ವೈ ಈ ಹುದ್ದೆಯ ಆಫರ್ ನೀಡಿದ್ದಾರೆ. 

ಆದ್ರೆ ಹೊಸ ಹುದ್ದೆ ಬಗ್ಗೆ ಇದುವರೆಗೆ ತೇಜಸ್ವಿನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹುದ್ದೆಯನ್ನು ತೇಜಸ್ವಿನಿ ಅವರು ಸ್ವೀಕರಿಸುತ್ತಾರೋ ಅಥವಾ ಇಲ್ಲ ಎನ್ನುವುದನ್ನು ಕಾದುನೋಡಬೇಕಿದೆ.