ಬೇಗುಸರಾಯ್(ಏ.25): ಚುನಾವಣಾ ಆಯೋಗ ಪರಿಚಯಿಸಿರುವ ಆನ್’ಲೈನ್ ಕ್ರೌಡ್ ಫಂಡಿಂಗ್’ನಲ್ಲಿ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕನ್ಹಯ್ಯ ಕುಮಾರ್ ದಾಖಲೆ ಬರೆದಿದ್ದಾರೆ.

ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಆನ್’ಲೈನ್ ಕ್ರೌಡ್ ಫಂಡಿಂಗ್’ನಲ್ಲಿ ಒಟ್ಟು 70 ಲಕ್ಷ ರೂ. ದೇಣಿಗೆ ಪಡೆಯುವ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ರೌಡ್ ಫಂಡಿಂಗ್ ಕ್ಯಾಂಪೇನ್ ಮೂಲಕ ಸಂಗ್ರಹವಾಗಿರುವ ಹಣದ ಪೈಕಿ ಶೇ.42.07 ರಷ್ಟು ಹಣವನ್ನು ಕನ್ಹಯ್ಯ ಕುಮಾರ್​ ಒಬ್ಬರೇ ಪಡೆದಿದ್ದಾರೆ. ಇದು ಯಾವುದೇ ಪಕ್ಷದ ಅಭ್ಯರ್ಥಿಯ ವ್ಯಯಕ್ತಿಕ ಅಧಿಕ ಗಳಿಕೆ ಎಂದು ಹೇಳಲಾಗಿದೆ.

ಚುನಾವಣೆಗಳಲ್ಲಿ ಅಕ್ರಮ ಹಣ ಹರಿವನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರೌಡ್ ಫಂಡಿಂಗ್ ಕ್ಯಾಂಪೇನ್ ಪರಿಚಯಿಸಿತ್ತು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.