ಪಾಟ್ನಾ : ಬಿಹಾರದಲ್ಲಿ ಮಹಾಮೈತ್ರಿ ಮಾಡಿಕೊಂಡಿರುವ ವಿಪಕ್ಷಗಳು ಒಂದೇ ಎಡಪಕ್ಷಗಳಿಗೆ ಕೈಕೊಟ್ಟಿವೆ. ಆದಾಗ್ಯೂ ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್‌ಗೆ ಬೇಗುಸರಾಯ್‌ ಕ್ಷೇತ್ರದಿಂದ ಸಿಪಿಐ ಟಿಕೆಟ್‌ ನೀಡಲು ತೀರ್ಮಾನಿಸಿದ್ದು, ಭಾನುವಾರ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ. 

ಬಿಹಾರದ 40 ಕ್ಷೇತ್ರಗಳಿಗೆ ಮಹಾಗಠಬಂಧನದ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಸಿಪಿಐಗೆ ಒಂದೂ ಸ್ಥಾನ ನೀಡಿಲ್ಲ. ಇದರಿಂದ ಕ್ರುದ್ಧವಾಗಿರುವ ಸಿಪಿಐ, ಕನ್ಹಯ್ಯ ಕುಮಾರ್‌ ಅವರನ್ನು ಕಣಕ್ಕಿಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. 

ಬೇಗುಸರಾಯ್‌ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಆರ್‌ಜೆಡಿಯಿಂದ ತನ್ವೀರ್‌ ಹಸನ್‌ ಸ್ಪರ್ಧಿಸಲಿದ್ದಾರೆ.