‘ಹರಕೆ ಹೊತ್ತಿದ್ರೆ ಮಕ್ಳು ಹುಟ್ಟಲ್ಲ, ಶೋಭನ ಮಾಡ್ಕೋಬೇಕು’

ಕಲಬರುಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

Kalaburagi congress candidate mallikarjun Kharge Slams PM Narendra Modi

ಕಲಬುರಗಿ[ಏ. 20]  ನಾನಂತೂ ದೇವರನ್ನು ನೋಡಿಲ್ಲ. ಹಾಗಂತ ಮೇಲೆ ಹೋಗಿ ಅನ್ಬೇಡಿ ನಾನು ಬೇಗ ಹೋಗುವವನಲ್ಲ. ನನ್ನ ನಿಜವಾದ ಬ್ರಹ್ಮ ನೀವೆ, ನನ್ನ ನಿಜವಾದ ದೇವರು ನೀವು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜನರನ್ನು ಉದ್ದೇಶಿಸಿ ಹೇಳಿದ್ದಾರೆ.

ನಾಲವಾರ, ರಾವೂರ ಪ್ರಚಾರ ಸಭೆ ನಂತರ ಬಂಕೂರಲ್ಲಿ ಮಾತನಾಡಿದ ಖರ್ಗೆ, ಬಂಕೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ. ಮಾತೆತ್ತಿದ್ರೆ‌ ಮೋದಿ ನೋಡಿ ವೋಟ್ ಹಾಕಿ ಅಂತಾರೆ, ಇದು ಹೇಗಿದೆ ಅಂದ್ರೆ ವರ ಸರಿಯಿಲ್ಲ, ಅವ್ರಪ್ಪನ ನೋಡಿ ವೋಟ್ ಮಾಡಿ ಅಂದ ಹಾಗೆ ಅಲ್ವಾ? ಎಂದು ಪ್ರಶ್ನೆ ಮಾಡಿದರು.

ಲೋಕ ಸಮರಕ್ಕೂ ಮುನ್ನವೇ ಬೆಳಗಾವಿಯಲ್ಲಿ ರಾಜಕಾರಣದ ದಂಗಲ್

ಜಾಧವ್ ಮೊನ್ನೆ ಮೊನ್ನೆ ಯಷ್ಟೆ ನಮ್ ಇಎಸ್ ಐ ಆಸ್ಪತ್ರೆಯಲ್ಲಿ ಕೆಲಸ ಮಾಡ್ಕೊಂಡಿದ್ದ ವ್ಯಕ್ತಿ. ಧರಂಸಿಂಗ್ ಹೇಳಿದ್ರೂ ಅನ್ನೋ ಕಾರಣಕ್ಕೆ ಅವ್ನಿಗೆ ಉತ್ತಮ ಸ್ಥಾನಮಾನ ಸಿಗೋ ಥರಾ ಮಾಡಿದ್ದೆ. ಇದು ನನ್ನ 48 ನೇ ವರ್ಷದ ಅಧಿಕಾರ ಜನ ಸುಮ್ನೆ ವೋಟ್ ಕೊಡ್ತಾರಾ ಹೇಳಿ? ಎಂದು ಕೇಳಿದರು.

ಮೋದಿ ಪ್ರೈಮ್ ಮಿನಿಸ್ಟರ್ ಆಗವ್ನೆ, ಈಗ ದೊಡ್ಡ ಚಾಯ್ ಅಂಗಡಿ ಇಡ್ಬೋದು. ಮೋದಿ ವಿರುದ್ಧ ಖರ್ಗೆ ವ್ಯಂಗ್ಯವಾಡಿದರು.  ಬರೆ ಹರಕೆ ಹೊತ್ತಿದ್ರೆ ಮಕ್ಳು ಹುಟ್ಟಲ್ಲ, ಶೋಭನ ಮಾಡ್ಕೋಬೇಕು ಆಗ್ಲೆ ಮಕ್ಳು ಹುಟ್ಟೋದು ಅದಕ್ಕೆ ಎಲ್ರೂ ವೋಟ್ ಮಾಡಿ. ಇವ್ನಿಗೆ ಠೇವಣಿ ಕೂಡ ಸಿಗದ ಹಾಗೆ ನೋಡ್ಕೊಳಿ ಎಂದು ಜಾಧವ್ ವಿರುದ್ಧ ವಾಗ್ದಾಳಿ ಮಾಡಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Latest Videos
Follow Us:
Download App:
  • android
  • ios