ಕಲಬುರಗಿ, (ಮಾ.25): ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಸಿಲ ನಗರಿ ಕಲಬುರಗಿಯಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಮೊನ್ನೇ ಅಷ್ಟೇ ಹಿರಿಯ ನಾಯಕ ಮಾಲಕರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದೀಗ ಮಾಜಿ ಶಾಸಕರೊಬ್ಬರು ಬಿಜೆಪಿ ತೊರೆಯಲು ರೆಡಿಯಾಗಿದ್ದಾರೆ. 

ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಅಸಮಾಧಾನ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಕರೆತರುತ್ತಿದೆ.ಆದ್ರೆ ಇದೀಯ ಮಾಜಿ ಶಾಸಕ ಬಾಬೂರಾವ್ ಚೌಹಾಣ್ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಗೆ ಶಾಕ್, ಮತ್ತೋರ್ವ ಕಾಂಗ್ರೆಸ್ ಸೀನಿಯರ್ ಲೀಡರ್ ಬಿಜೆಪಿಗೆ

ಉಮೇಶ್ ಜಾಧವ್ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ಕೊಟ್ಟಿದ್ದರಿಂದ ದಲಿತ ನಾಯಕರಾಗಿರುವ ಬಾಬೂರಾವ್ ಚೌಹಾಣ್ ಅಸಮಧಾನಗೊಂಡಿದ್ದು, ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಬೂರಾವ್ ಚೌಹಾಣ್,  ಕೆಜೆಪಿಯಲ್ಲಿದ್ದಾಗ ರೇವು ನಾಯಕ್ ಮೂಲೆ ಗುಂಪು ಮಾಡಲು ನನ್ನನ್ನ ಬಳಸಿಕೊಂಡ್ರು. ನನ್ನನ್ನ ಮೂಲೆ ಗುಂಪು ಮಾಡಲಿಕ್ಕೆ ಉಮೇಶ್ ಜಾಧವ್ ಅವರನ್ನ ಬಳಸಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಅವರ ಕರೆತಂದಿದ್ದು ಸರಿಯಲ್ಲ. ನಾನು ಸಾಕಷ್ಟು ಕೆಲಸ ಮಡಿದ್ದೆ. ನಾನು ಟಿಕೆಟ್ ಆಕಾಕ್ಷಿಯಾಗಿದ್ದೆ. ಆದರೆ ಅವರಿಗೆ ಮಣೆ ಹಾಕಿರುವುದು ಸಾಕಷ್ಟು ಅನುಮಾನ ಹುಟ್ಟಿಸಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ನಾನು ಬಿಜೆಪಿಗೆ ರಾಜಿನಾಮೆ ಕೊಡಲು ಕೊಡ್ತಿದ್ದೇನೆ. ಮುಂದಿನ ತೀರ್ಮಾನದ ಬಗ್ಗೆ ಎರಡು ಮೂರು ದಿನದಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.