ಕೇಂದ್ರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳ ವಿರುದ್ಧ ಜಿಗ್ನೇಶ್ ಮೇವಾನಿ ಆವಾಜ್| ಕೇಂದ್ರ-ರಾಜ್ಯ ಸರ್ಕಾರಗಳು ದಲಿತ ವಿರೋಧಿ ಎಂದ ಜಿಗ್ನೇಶ್ ಮೇವಾನಿ| ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯದ ಆರೋಪ| ದಲಿತ ಯುವಕನೋರ್ವನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ| ಬಿಜೆಪಿ ದಲಿತರ ರಕ್ತದಲ್ಲಿ ಹೋಳಿ ಆಡಿದೆ ಎಂದು ಆರೋಪಿಸಿದ ಶಾಸಕ|

ಅಹ್ಮದಾಬಾದ್(ಮಾ.22): ಮನುವಾದಿ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ದಲಿತರಿಗೆ ಸುರಕ್ಷಿತವಲ್ಲ ಎಂದು ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ ಹೇಳಿದ್ದಾರೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಲಿತ ವಿರೋಧಿ ಧೋರಣೆಯ ವಿರುದ್ಧ ವಾಗ್ದಾಳಿ ನಡೆಸಿರುವ ಜಿಗ್ನೇಶ್, 'ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್' ಎಂದು ಹೇಳುವ ಸರ್ಕಾರ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದರು.

ದಲಿತ ವಿರೋಧಿ ಹಾಗೂ ಜಾತೀವಾದಿ ಪರವಾದ ನಿಲವನ್ನೇ ಎರಡೂ ಸರ್ಕರಗಳು ಪ್ರತಿಪಾದಿಸುತ್ತಿದ್ದು, ಈ ಸರ್ಕಾರಗಳನ್ನು ಕಿತ್ತೆಸೆಯುವ ಕಾಲ ಕೂಡಿ ಬಂದಿದೆ ಎಂದು ಹೇಳಿದರು.

Scroll to load tweet…

ಈ ಹೋಳಿ ಹಬ್ಬವನ್ನು ಬಿಜೆಪಿ ದಲಿತರ ರಕ್ತ ಜೊತೆ ಆಡಿದೆ ಎಂದು ಆರೋಪಿಸಿರುವ ಜಿಗ್ನೇಶ್, ದಲಿತ ಯುವಕನೋರ್ವನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.

ಇದೇ ವೇಳೆ ಘಟನೆಗೆ ಕಾರಣರಾದವರನ್ನು ಮುಂದಿನ 48 ಗಂಟೆಗಳಲ್ಲಿ ಬಂಧಿಸದಿದ್ದರೆ ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿ ಪ್ರತಿಭಟನೆ ಮಾಡುವುದಾಗಿ ಜಿಗ್ನೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.