ಹಾಸನ, (ಮಾ.13): ದೊಡ್ಡಗೌಡ್ರ ನಂತರ ಹಾಸನ ಉತ್ತರಾಧಿಕಾರಿ ಯಾರು ಎನ್ನುವುದಕ್ಕೆ ಸ್ವತಃ ಎಚ್.ಡಿ.ದೇವೇಗೌಡ ಅವರೇ ಇಂದು (ಬುಧವಾರ) ಸ್ಪಷ್ಟಪಡಿಸಿದ್ದಾರೆ.

"

ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ದೇವೇಗೌಡ ಅವರು, ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಈ ಮೂಲಕ ದೇವೇಗೌಡ ನಂತರ ಹಾಸನ ಅಭ್ಯರ್ಥಿ ಯಾರು ಎನ್ನುವ ಗೊಂದಲಕ್ಕೆ ತೆರೆ ಎಳೆದರು.

ರಾಜಕೀಯ ಪ್ರ’ಹಾ’ಸನ: ಎ. ಮಂಜು ಹಳಸಿದ ಅನ್ನ, ಬಿಜೆಪಿಗೆ ಬರೋದು ಯಾಕಣ್ಣಾ?

ಹಾಸನ ಲೋಕಸಭೆ ಚುನಾವಣಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಹಾಸನ-ಮಂಡ್ಯದಲ್ಲಿ  ಮೊಮ್ಮಕ್ಕಳ ಸ್ಪರ್ಧೆ ಖಚಿತ. ನನ್ನ ಸ್ಪರ್ಧೆ ಎಲ್ಲಿಂದ ಗೊತ್ತಿಲ್ಲ ಎಂದು ಹೇಳಿದರು. 

ಹಾಸನದಲ್ಲಿ ಗೌಡರ ಕುಟುಂಬ ಕಣ್ಣೀರು: ಅಳ್ಬೇಡಿ ಗೌಡ್ರೇ ಅಂದ್ರು ಕಾರ್ಯಕರ್ತರು!

ಈ ಮೂಲಕ ತವರಲ್ಲಿ ಚುನಾವಣಾ ರಾಜಕೀಯಕ್ಕೆ ದೊಡ್ಡಗೌಡ್ರು ವಿದಾಯ ಹೇಳಿದು. 1962 ರಿಂದ ಚುನಾವಣಾ ರಾಜಕೀಯದಲ್ಲಿದ್ದ ದೇವೇಗೌಡ ಅವರು, 1991 ರಲ್ಲಿ ಮೊದಲ ಚುನಾವಣೆಯಲ್ಲೇ ಲೋಕಸಭೆಗೆ ಪ್ರವೇಶಿಸಿದ್ದರು.  ಈಗ ತಮ್ಮ ಕ್ಷೇತ್ರವನ್ನು ಮೊಮ್ಮನಿಗೆ ಬಿಟ್ಟುಕೊಟ್ಟಿದ್ದಾರೆ. 

ಆದ್ರೆ ದೇವೇಗೌಡ ಅವರು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದನ್ನು ಸುಳಿವು ಸಹ ಬಿಟ್ಟುಕೊಡಲಿಲ್ಲ.