ಹುಬ್ಬಳ್ಳಿ, [ಏ.21]: 'ನಾನು ಸತತ 7 ಬಾರಿ ವಿಧಾನ ಪರಿಷತ್‌ನಿಂದ ಸದಸ್ಯನಾಗಿ ಆಯ್ಕೆಯಾಗಿದ್ದೆನೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲಾ, ನಾನೊಬ್ಬ ಸಮರ್ಥ ನಾಯಕ. ಹೀಗಿದ್ದರೂ ನನಗೆ ಮಂತ್ರಿಸ್ಥಾನ ಸಿಗಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಹೊರಟ್ಟಿ,  ನಾನೊಬ್ಬ ಸಮರ್ಥ ನಾಯಕನಾಗಿದ್ದರೂ ನನಗೆ ಮಿನಿಸ್ಟರ್ ಸ್ಥಾನ ಕೊಟ್ಟಿಲ್ಲ. ಅದಕ್ಕೆ ನನಗೆ ಅಸಮಾಧಾನ ಇದೆ ಎಂದು ಜೆಡಿಎಸ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಲಿಂಗಾಯರ ಪ್ರತ್ಯೇಕ ಲಿಂಗಾಯತ ಬಗ್ಗೆ ಪ್ರತಿಕ್ರಿಯಿಸಿದ ವರು, ಎಲ್ಲರೂ ಜಾತಿಯನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಕೇವಲ ಲಿಂಗಾಯತ ಧರ್ಮ, ಲಿಂಗಾಯತರು ಬಿಜೆಪಿಯವರ ಸ್ವತ್ತಲ್ಲ. ಪ್ರತ್ಯೇಕ ಲಿಂಗಾಯತ ಹೋರಾಟ ಈಗ ಅಪ್ರಸ್ತುತ ಎಂದರು.

ಲಿಂಗಾಯತ ಹೋರಾಟ ಇಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಲಿಂಗಾಯತರನ್ನ ಮುಂದೆ ಇಟ್ಟುಕೊಂಡು ವಿನಯ್ ಕುಲಕರ್ಣಿಯವರನ್ನ ಸೋಲಿಸಲು ಮುಂದಾಗುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.