ಬೆಂಗಳೂರು : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಮೈತ್ರಿಯಾಗಿ ಎರಡೂ ಪಕ್ಷಗಳು ಚುನಾವಣೆ ಎದುರಿಸುತ್ತಿದ್ದು, ಜೆಡಿಎಸ್ ತೊರೆದ ನಾಯಕರು ಇದೀಗ ಅತ್ಯಾಪ್ತರಾಗಿದ್ದಾರೆ. 

 ಜೆಡಿಎಸ್‌ ಪಕ್ಷ ತೊರೆದ ಬಳಿಕ ಜೆಡಿಎಸ್‌ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಮೀರ್‌ ಅಹ್ಮದ್‌ಖಾನ್‌ ಅವರು ಗುರುವಾರದ ಸಮಾವೇಶದಲ್ಲಿ ಜೆಡಿಎಸ್‌ ಶಾಲು ಧರಿಸಿ ಭಾಗವಹಿಸಿದ್ದರು. 

ಈ ಮೂಲಕ ಮೈತ್ರಿ ಧರ್ಮ ಪಾಲಿಸಲು ಎಲ್ಲವನ್ನೂ ಮರೆತು ಒಟ್ಟಾಗಿರುವುದಾಗಿ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.