ಬೆಂಗಳೂರು[ಮೇ.22]: ಲೋಕಸಭಾ ಚುನಾವಣೆ ಈಗಾಗಲೇ ಮುಕ್ತಾಯವಾಗಿದೆ. ಭಾರೀ ಕುತೂಹಲ ಮುಡಿಸಿರುವ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿದ್ದರೂ EVM ಬಗ್ಗೆ ಪ್ರತಿಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಕೆಲ ನಾಯಕರು EVM ಬದಲಾಯಿಸಿರುವ ಆರೋಪ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಮತಯಂತ್ರಗಳು ಹ್ಯಾಕ್ ಆಗುವ ಸಂಶಯ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೇ ಸೇ. 50ರಷ್ಟು ಮತಗಳನ್ನು ವಿವಿಪ್ಯಾಟ್ ಜೊತೆ ಹೋಲಿಕೆ ಮಾಡಬೇಕೆಂದು ವಿರೋಧ ಪಕ್ಷದ ನಾಯಕರು ಧರಣಿ ನಡೆಸಿದ್ದಾರೆ. ಆದರೀಗ ಇವೆಲ್ಲದರ ಮಧ್ಯೆ ಖಡಕ್ ಪೊಲೀಸ್ ಅಧಿಕಾರಿ EVMಗೆ ಸಂಬಂಧಿಸಿದಂತೆ ಮಾಡಿರುವ ಟ್ವಿಟ್ ಒಂದು ಭಾರೀ ವೈರಲ್ ಆಗಿದೆ.

ಹೌದು EVM ಬಗ್ಗೆ ಬರೆದಿರುವ ಕರ್ನಾಟಕದ ಮೊದಲ ಮಹಿಳಾ IPS ಆಫೀಸರ್ ಡಿ. ರೂಪಾ 'ವಿದ್ಯುನ್ಮಾನ ಮತಯಂತ್ರ ಹ್ಯಾಕ್ ಮಾಡುವುದು ಅಥವಾ ವಿದ್ಯುನ್ಮಾನ ಮತಯಂತ್ರದಲ್ಲಿ ಹಸ್ತಕ್ಷೇಪ ಮಾಡುವುದು ಅಸಾಧ್ಯ. ಇದು ರಾಜ್ಯದ, ದೇಶದ ಎಲ್ಲಾ IAS ಅಧಿಕಾರಿಗಳಿಗೆ ತಿಳಿದಿರುವ ವಿಷಯ. ಏಕೆಂದರೆ ಅವರು ಚುನಾವಣೆ ಸಂದರ್ಭದಲ್ಲಿ ರಿಟರ್ನಿಂಗ್ ಆಫಿಸರ್, ಸಹಾಯಕ ರಿಟರ್ನಿಂಗ್ ಆಫಿಸರ್ ಆಗಿ ಕಾರ್ಯನಿರ್ವಹಿಸುತ್ತಾರೆ.  ಹ್ಯಾಕಿಂಗ್ ಗೆ ಅವಕಾಶ ಕೊಡುವ ಮೂಲಕ ಅವರು ತಮ್ಮ ನೌಕರಿಗೆ ಕುತ್ತು ತರುವರೇ? ಎಲ್ಲರನ್ನು ಖರೀದಿಸಲು ಸಾಧ್ಯವೆ?' ಎಂದು ಪ್ರಶ್ನಿಸಿದ್ದಾರೆ.

ಸದ್ಯ ಪೊಲೀಸ್ ಅಧಿಕಾರಿಯ ಈ ಟ್ವೀಟ್ ಭಾರೀ ವೈರಲ್ ಆಗಿದೆ.