ನವದೆಹಲಿ(ಮೇ.21): ಮಹತ್ವದ ಬೆಳವಣಿಗೆಯೊಂದರಲ್ಲಿ ಮೇ.23ರ ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ, ಭಯೋತ್ಪಾದಕ ದಾಳಿಯಾಗುವ ಸಂಭವನೀಯತೆ ಹೆಚ್ಚಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೆ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಿದ್ದು, ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಖಚಿತವಾಗಿ ಹೇಳಿವೆ. ಇದರಿಂದ ಬೇಸತ್ತಿರುವ ಪಾಕಿಸ್ತಾನ, ಮೇ.23ರಂದು ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ಪಾಕ್ ಬೆಂಬಲಿತ ಉಗ್ರರು ಈಗಾಗಲೇ ಗಡಿಯಲ್ಲಿ ಸನ್ನದ್ಧವಾಗಿದ್ದು, ಯಾವಾಗ ಬೇಕಾದರೂ ಗಡಿ ದಾಟಿ ಕಣಿವೆ ರಾಜ್ಯಕ್ಕೆ ನುಗ್ಗಬಹುದು ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇನ್ನು ಗುಪ್ತಚರ ಮಾಹಿತಿ ಆಧರಿಸಿ ದೇಶಾದ್ಯಂತ ಕಟ್ಟೆಚ್ಚರದ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಇಲಾಖೆ ಸಿದ್ಧವಾಗಿದೆ.