Asianet Suvarna News Asianet Suvarna News

ನೀತಿ ಸಂಹಿತೆ ಪರಿಣಾಮ: ಚೌಕಿದಾರ್ ಚಹಾ ಕಪ್ ವಾಪಸ್!

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ| #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದ ರೈಲ್ವೇ ಇಲಾಖೆ| #MainBhiChowkidar ಟಿಕೆಟ್ ಗಳನ್ನೂ ವಾಪಸ್ಸು ಪಡೆದಿರುವ ಇಲಾಖೆ| ತಾಬ್ದಿ ರೈಲುಗಳಲ್ಲಿ ಕೊಡಲಾಗುತ್ತಿದ್ದ #MainBhiChowkidar ಚಹಾ ಕಪ್‌ಗಳು| ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ|

Indian Railway Withdraws Main Bhi Chowkidar tea Cups
Author
Bengaluru, First Published Mar 29, 2019, 2:27 PM IST

ನವದೆಹಲಿ(ಮಾ.29): ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೇ ಇಲಾಖೆ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿದೆ.

ಈ ಹಿಂದೆ #MainBhiChowkidar ಎಂದು ಮುದ್ರಣಗೊಂಡಿರುವ ಟಿಕೆಟ್ ಗಳನ್ನು ವಾಪಸ್ಸು ಪಡೆದಿದ್ದ ರೈಲ್ವೇ ಇಲಾಖೆ, ಇದೀಗ ಶತಾಬ್ದಿ ರೈಲುಗಳಲ್ಲಿ ಕೊಡಲಾಗುತ್ತಿದ್ದ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿದೆ.

ಈ ಕುರಿತು ಖುದ್ದು ಪ್ರಯಾಣಿಕರೇ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಅದರಂತೆ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿರುವ ರೈಲ್ವೇ ಇಲಾಖೆ, ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಭರವಸೆ ನೀಡಿದೆ.

Follow Us:
Download App:
  • android
  • ios