ಬೆಂಗಳೂರು (ಏ.17): ನಾಳೆ(ಏ.18) ದೇಶದಾದ್ಯಂತ 2ನೇ ಹಂತದ ಮತದಾನ ನಡೆಯಲಿದ್ದು, ಕರ್ನಾಟಕ ಸೇರಿದಂತೆ 13 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಒಟ್ಟು 97 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಪೈಕಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆ:
2ನೇ ಹಂತದ ಮತದಾನದಲ್ಲಿ ಅಸ್ಸಾಂ(05), ಬಿಹಾರ(05),  ಛತ್ತೀಸ್​ಘಡ್(03), ಜಮ್ಮು-ಕಾಶ್ಮೀರ(02), ಕರ್ನಾಟಕ(14), ಮಹಾರಾಷ್ಟ್ರ(10), ಮಣಿಪುರ್(01), ಓದಿಶಾ(05), ತಮಿಳುನಾಡು(39), ತ್ರಿಪುರ(01), ಉತ್ತರಪ್ರದೇಶ(08), ಪಶ್ಚಿಮ ಬಂಗಾಳ(03), ಕೇಂದ್ರಾಡಳಿತ ಪ್ರದೇಶ ಪುದುಚೇರಿ(01) ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಒಟ್ಟು ಅಭ್ಯರ್ಥಿಗಳ ಸಂಖ್ಯೆ:
97 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1,644 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ರಾಷ್ಟ್ರೀಯ ಪಕ್ಷ(209), ಪ್ರಾದೇಶಿಕ ಪಕ್ಷ(107) ಮತ್ತು ಸ್ವತಂತ್ರ್ಯ(888) ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಶ್ರೀಮಂತ ಅಭ್ಯರ್ಥಿಗಳು:
ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಸಂತ್ ಕುಮಾರ್ ಹೆಚ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಒಟ್ಟು 417 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಬಿಹಾರದ ಪೂರ್ನಿಯಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ್ ಸಿಂಗ್ 341 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಇದ್ದು, ಒಟ್ಟು 338 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ.

ಆಸ್ತಿ ವಿವರ:
ಒಟ್ಟು 1,644 ಭ್ಯರ್ಥಿಗಳ ಪೈಕಿ 427 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ಶೇ.27ರಷ್ಟು ಅಭ್ಯರ್ಥಿಗಳು 1 ಕೋಟಿ ಮತ್ತು ಅದರ ಮೇಲ್ಪುಟ್ಟು ಆಸ್ತಿ ಹೊಂದಿದ್ದಾರೆ. ಶೇ.11ರಷ್ಟು ಅಭ್ಯರ್ಥಿಗಳ ಆಸ್ತಿ 5 ಕೋಟಿ ಗೂ ಅಧಿಕವಿದೆ. ಅದರಂತೆ ಶೇ.41 ರಷ್ಟು ಅಭ್ಯರ್ಥಿಗಳ ಆಸ್ತಿ 10 ಲಕ್ಷ ರೂ.ಗಿಂತ ಕಡಿಮೆ ಇದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಮತದಾನ?:
ಬೆಂಗಳೂರು ಕೇಂದ್ರ[ಅರ್ಷದ್ ರಿಜ್ವಾನ್(INC), ಪಿಸಿ ಮೋಹನ್(BJP), ಮತ್ತು ಪ್ರಕಾಶ್ ರೈ(Independent)]
ಬೆಂಗಳೂರು ದಕ್ಷಿಣ[ಬಿಕೆ ಹರಿಪ್ರಸಾದ್(INC), ತೇಜಸ್ವಿ ಸೂರ್ಯ(BJP)]
ಬೆಂಗಳೂರು ಉತ್ತರ[ಕೃಷ್ಣಭೈರೇಗೌಡ(INC), ಸದಾನಂದಗೌಡ(BJP)]
ಬೆಂಗಳೂರು ಗ್ರಾಮೀಣ[ಡಿಕೆ ಸುರೇಶ್(INC), ಅಶ್ವಥ್ ನಾರಾಯಣ್ ಗೌಡ(BJP)]
ಮಂಡ್ಯ[ನಿಖಿಲ್ ಕುಮಾರಸ್ವಾಮಿ(ಜೆಡಿಎಸ್), ಸುಮಲತಾ ಅಂಬರೀಶ್(ಪಕ್ಷೇತರ)]
ಮೈಸೂರು-ಕೊಡುಗು[ವಿಜಯ್ ಶಂಕರ್(INC), ಪ್ರತಾಪ್ ಸಿಂಹ(BJP)]
ಹಾಸನ[ಪ್ರಜ್ವಲ್ ರೇವಣ್ಣ(JDS), ಎ ಮಂಜು(BJP)]
ಚಿಕ್ಕಬಳ್ಳಾಪುರ[ವೀರಪ್ಪ ಮೊಯ್ಲಿ(INC), ಬಚ್ಚೇಗೌಡ(BJP)]
ಕೋಲಾರ[ಕೆ.ಹೆಚ್. ಮುನಿಯಪ್ಪ(INC), ಮುನಿಸ್ವಾಮಿ(BJP)]
ಚಾಮರಾಜನಗರ[ಧೃವನಾರಾಯಣ್ (INC), ಶ್ರೀನಿವಾಸ್ ಪ್ರಸಾದ್(BJP)]
ಚಿತ್ರದುರ್ಗ[ ಬಿಎನ್ ಚಂದ್ರಪ್ಪ(INC), ನಾರಾಯಣಸ್ವಾಮಿ(BJP)]
ಉಡುಪಿ-ಚಿಕ್ಕಮಗಳೂರು [ಪ್ರಮೋದ್ ಮಧ್ವರಾಜ್(INC), ಶೋಭಾ ಕರಂದ್ಲಾಜೆ(BJP)]
ತುಮಕೂರು[ಹೆಚ್.ಡಿ. ದೇವೇಗೌಡ(JDS), ಜಿ.ಎನ್. ಬಸವರಾಜ್(BJP)] 
ದಕ್ಷಿಣ ಕನ್ನಡ ಜಿಲ್ಲೆ[ ಮಿಥುನ್ ರೈ(INC), ನಳಿನ್ ಕುಮಾರ್ ಕಟೀಲ್(BJP)]

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.