ನವದೆಹಲಿ[ಏ.30]: ಪ್ರತಿ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುತ್ತದೆ. ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆ ಸಿದ್ಧಪಡಿಸುವ ಈ ಶಾಯಿ ಕಡೇ ಪಕ್ಷ ಒಂದು ಅಥವಾ ಎರಡು ವಾರವಾದರೂ ಬೆರಳಿನಲ್ಲಿ ಇರುತ್ತದೆ. ಆದರೆ ಇದನ್ನು ಸುಲಭವಾಗಿ ಅಳಿಸಿಬಿಡಬಹುದು ಎಂದು ಕಾಂಗ್ರೆಸ್‌ ವಕ್ತಾರ ಸಂಜಯ್‌ ಝಾ ಟ್ವೀಟ್‌ ಮಾಡಿ ಸಂಚಲನಕ್ಕೆ ಕಾರಣವಾಗಿದ್ದಾರೆ.

ಸೋಮವಾರ ಮತದಾನದ ಬಳಿಕ ನೇಲ್‌ ಪಾಲಿಷ್‌ ರಿಮೂವರ್‌ ಹಚ್ಚಿದೆ. ಶಾಯಿ ಅಳಿಸಿಹೋಯಿತು ಎಂದು ಹೇಳಿದ್ದಾರೆ. ಇದನ್ನು ಕೆಲವು ಬೆಂಬಲಿಸಿದ್ದಾರೆ, ಕೆಲವರು ನೇಲ್‌ ಪಾಲಿಷ್‌ ರಿಮೂವರ್‌ ಏಕೆ ಹಚ್ಚಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಏ.11ರಿಂದ ಆರಂಭವಾದ ಮೊದಲ ಹಂತದ ಲೋಕಸಭೆ ಚುನಾವಣೆಯಿಂದಲೂ ಶಾಯಿ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಲೇ ಇವೆ. ಈ ಬಾರಿಯ ಚುನಾವಣೆಗೆ ಆಯೋಗ ಮೈಸೂರು ಕಂಪನಿಯಿಂದ 26 ಲಕ್ಷ ಶಾಯಿ ಬಾಟಲಿಗಳನ್ನು 33 ಕೋಟಿ ರು. ವೆಚ್ಚದಲ್ಲಿ ಖರೀದಿಸಿದೆ.