ಕಣ್ಣೂರು[ಏ.24]: ಹೊಲ ಗದ್ದೆಗಳಲ್ಲಿ ಹಾವು, ಚೇಳು ಅಥವಾ ಸರಿಸೃಪಗಳು ಕಂಡರೆ ಎಂಥವರಿಗೂ ಭಯವಾಗುತ್ತದೆ. ಇನ್ನು ಚುನಾವಣೆ ಮತಗಟ್ಟೆಗೆ ಹಾವು ನುಗ್ಗಿದರೆ, ಮತ ಚಲಾಯಿಸಲು ಜಮಾಯಿಸಿದ ಮತದಾರರ ಸ್ಥಿತಿ ಏನಾಗಬೇಡ?

ಹೌದು, ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್‌ ಕಂಡಕ್ಕೈ ಬೂತ್‌ನಲ್ಲಿನ ವಿವಿಪ್ಯಾಟ್‌ನಲ್ಲಿ ಸಣ್ಣ ಹಾವು ಕಾಣಿಸಿಕೊಂಡಿದೆ. ಈ ವೇಳೆ ಚುನಾವಣಾಧಿಕಾರಿಗಳು ಮತ್ತು ಮತ ಚಲಾಯಿಸಲು ಭಾರೀ ಪ್ರಮಾಣದಲ್ಲಿ ಸೇರಿದ್ದ ಮತದಾರರಲ್ಲಿ ಕೆಲಹೊತ್ತು ಆತಂಕ ಮನೆ ಮಾಡಿತ್ತು. ಆದಾಗ್ಯೂ, ಹಾವನ್ನು ಮತಯಂತ್ರದಿಂದ ಸುರಕ್ಷಿತವಾಗಿ ಹೊರತೆಗೆದು, ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಅಧಿಕೃತವಾಗಿ ಮತ ಚಲಾವಣೆಗೆ ಅವಕಾಶ ಮಾಡಿಕೊಡುವ ಮುನ್ನ ಅಧಿಕಾರಿಗಳು ಒಮ್ಮೆ ನಡೆಸುವ ಅಣಕು, ಮತ ಚಲಾವಣೆ ವೇಳೆ ಹಾವು ಕಾಣಿಸಿಕೊಂಡಿತ್ತು.