ಲಖನೌ[ಮೇ. 07]  ಒಂದು ವೇಳೆ ನನಗೆ ಪ್ರಧಾನಿಯಾಗುವ ಅವಕಾಶ ಸಿಕ್ಕರೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ವರಿಷ್ಠೆ ಮಯಾವತಿ ಹೇಳಿದ್ದಾರೆ.

ಅಂಬೇಡ್ಕರ್ ನಗರದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ, ಎಲ್ಲವೂ ಅಂದುಕೊಂಡಂತಾದರೆ, ನಾನು ಅಂಬೇಡ್ಕರ್ ನಗರದಿಂದ ಕಣಕ್ಕಿಳಿಯುತ್ತೇನೆ. ಇಡೀ ಭಾರತದ ರಾಜಕಾರಣದ ಹಾದಿ ಅಂಬೇಡ್ಕರ್ ನಗರದ ಮೂಲಕವೇ ಹಾದು ಹೋಗುತ್ತದೆ ಎಂದರು.

ಫಲಿತಾಂಶಕ್ಕಿನ್ನೂ 13 ದಿನ, ಆದ್ರೆ ಪ್ರಜ್ವಲ್ ರೇವಣ್ಣ ಈಗಾಗಲೇ ಹಾಸನ ಸಂಸದ!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಲು ಮರೆಯದ ಮಾಯಾವತಿ ಮೋದಿ ಅವರ ಶಕೆ ಮುಕ್ತಾಯವಾಗಿದೆ ಎಂದರು. 1989, 1998, 1999  ಮತ್ತು 2004 ರಲ್ಲಿ ಮಾಯಾವತಿ ಅಂಬೇಡ್ಕರ್ ನಗರದಿಂದಲೇ ಸಂಸತ್ ಪ್ರವೇಶ ಮಾಡಿದ್ದರು.