ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಪರವಾಗಿ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಎಸ್ ಎಂ. ಕೃಷ್ಣ ಹೇಳಿದ್ದಾರೆ.
ಹಾಸನ: ಮಹಾಗಠಬಂಧನ್ ಎಲ್ಲಿದೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿರುವ ಮಾಜಿ ಸಿಎಂ ಎಸ್. ಎಂ.ಕೃಷ್ಣ, ಪ್ರಧಾನಿ ಮೋದಿ ಮುಂದೆ ಮಹಾಗಠಬಂಧನ್ ಕುಬ್ಜವಾಗಿ ಕಾಣುತ್ತದೆ ಎಂದಿ ದ್ದಾರೆ. ಇದೇ ವೇಳೆ ಮಂಡ್ಯ ಪ್ರಚಾರಕ್ಕೆ ಹೋಗುವ ಸಾಧ್ಯತೆ ಕಡಿಮೆ. ಬಿಜೆಪಿ ಅಭ್ಯರ್ಥಿ ಗಳಿರುವಲ್ಲಿ ಮಾತ್ರ ಹೋಗುವುದಾಗಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರೂ ಅಲ್ಲಿ ಕಾಂಗ್ರೆಸ್ ಗೆ ಕೇವಲ 2 ಸೀಟುಗಳನ್ನು ನೀಡಿ ದೆ. ಇನ್ನು ದೇಶದ ಆನೇಕ ಕಡೆ ಮಹಾ ಗಠಬಂಧನ್‌ನಲ್ಲಿ ನಿರೀಕ್ಷಿತ ರೀತಿಯಲ್ಲಿ ಹೊಂದಾ ಣಿಕೆ ಆಗಿಲ್ಲ.
ಹೀಗಿದ್ದ ಮೇಲೆ ಆ ಮೈತ್ರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆ ದೇಶದಲ್ಲಿ ಕಾರ್ಯಗತ ವಾಗುತ್ತದೆ. ಯಾರೇ ಏನೇ ಹೇಳಿದರೂ ಇನ್ನೊಂದು ಬಾರಿ ಮೋದಿ ಅವರು ಪ್ರಧಾನಿ ಆಗುವುದನ್ನು ತಪ್ಪಿಸಲು ಸಾಧ್ಯ ವಿಲ್ಲ ಎಂದು ಹೇಳಿದರು. ಇದೇವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರ ವಯನಾಡ್ ಸ್ಪರ್ಧೆಯ ಬಗ್ಗೆ ಟೀಕೆ ಮಾಡಿದ ಅವರು, ಕಳೆದ ಚುನಾವಣೆಯಲ್ಲಿ ಅಮೇಠಿಯಲ್ಲಿ ಅವರ ವಿರುದ್ಧ ಸೋತಿದ್ದ ಸ್ಮ್ಮತಿ ಇರಾನಿ ಅಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಈ ಕಾರಣದಿಂದ ತಾವುಸೋಲಬಹುದು ಎಂಬ ಭಯದಿಂದ ರಾಹುಲ್ ವಯನಾಡ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರು.
ಸ್ಪಷ್ಟನೆ: ದೇವೇಗೌಡರು ತಮ್ಮ ಬಗ್ಗೆ ಮಾಡಿರುವ ಆರೋಪಗಳಿಗೆ ಉತ್ತರಿಸಿದ ಕೃಷ್ಣ, ಮಂಡ್ಯ ಚುನಾವಣೆ ಒಕ್ಕಲಿಗರ ಸಂಘದ ಚುನಾವಣೆಯಂತಲ್ಲ ಎಂದು ಹೇಳಿದ್ದು, ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಪೂರಕವಾಗಿ ಹೇಳಿದ್ದೇ ಹೊರತು ಯಾರನ್ನು ಕಡೆಗಣಿಸುವ ಉದ್ದೇಶ ದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ದೇವೇಗೌಡರ ಡಿಕ್ಷನರಿ ಯಲ್ಲಿ ಮುಂದೆ ಸ್ಪರ್ಧಿಸುವುದಿಲ್ಲ ಎಂದ ಪದಕ್ಕೆ ಯಾವ ಅರ್ಥ ಇದೆಯೋ ಗೊತ್ತಿಲ್ಲ ಎಂದರು. ನಾನು ಬಿಜೆಪಿ ಅಭ್ಯರ್ಥಿ ಗಳು ಸ್ಪರ್ಧಿಸುವ ಕಡೆ ಮಾತ್ರ ಪ್ರಚಾರಕ್ಕೆ ಹೋಗುವುದಕ್ಕೆ ಸೀಮಿತ. ಹಾಗಾಗಿ ಮಂಡ್ಯ ಪ್ರಚಾರಕ್ಕೆ ಹೋಗುವ ಸಾಧ್ಯತೆ ಕಮ್ಮಿ ಎಂದೂ ಕೃಷ್ಣ ಹೇಳಿದರು.
