ಮೈಸೂರು (ಮಾ. 14): ಬೇರೆ ಪಕ್ಷಗಳಲ್ಲಿ ಸಿನಿಮಾ ಟಿಕೆಟ್ ಗೆ ಗೊಂದಲ ಇಲ್ಲ. ಆದರೆ ಚುನಾವಣೆ ಟಿಕೆಟ್ ಗೆ ಗೊಂದಲ ಇದೆ ಎಂದು  ಮೈತ್ರಿ ಪಕ್ಷದ ಟಿಕೆಟ್ ಹಂಚಿಕೆ ವಿಚಾರವನ್ನ‌ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ. 

ದುಷ್ಮನ್‌ಗಳನ್ನೂ ದೋಸ್ತ್ ಮಾಡುತ್ತೆ ಚಹಾ: ಪಾಕ್‌ ವ್ಯಾಪಾರಿಗೆ ಅಭಿ ಪೋಸ್ಟರ್‌ ಬಾಯ್‌!

’ಸೀತಾರಾಮ ಕಲ್ಯಾಣ’ ಚಿತ್ರದ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ ಸಂಸದ ಪ್ರತಾಪ್ ಸಿಂಹ.  

ಬೇರೆ ಪಕ್ಷಗಳಲ್ಲಿ ಟಿಕೆಟ್ ಗೊಂದಲ‌ ಇರಬಹುದು. ಆದರೆ ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ‌ ಇಲ್ಲ.  ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ಗಿಂತ ದೊಡ್ಡವರು ಯಾರೂ ಇಲ್ಲ. ಚುನಾವಣೆಗೆ ನಿಲ್ಲಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಆದರೆ ಯಡಿಯೂರಪ್ಪ ಹಾಲಿ ಸಂಸದರಿಗೆ ಟಿಕೆಟ್ ಗ್ಯಾರಂಟಿ ಎಂದಿರುವಾಗ ಯಾವುದೆ ಗೊಂದಲವಿಲ್ಲ ಎಂದಿದ್ದಾರೆ. 

ಕಾಂಗ್ರೆಸ್ ತೊರೆಯಲು ಸಿದ್ಧವಾದ ಮಾಜಿ ಸಚಿವಗೆ ಬಿಜೆಪಿ ಟಿಕೆಟ್..?

ನಾವು ಚುನಾವಣೆಯಲ್ಲಿ ಆರಿಸಿ ಬರುವುದು ಜನರ ಕೆಲಸ‌ ಮಾಡಲು.  ನಾನು ಸಂಸದನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅವುಗಳನ್ನ‌ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಜಾತಿ ಲೆಕ್ಕಾಚಾರ, ಸಮೀಕರಣಗಳು ಚುನಾವಣೆಗೆ ಮುಖ್ಯವಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.