ಬೆಂಗಳೂರು (ಮಾ. 26): ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಪ್ರತಿಷ್ಠೆಯ ಕಣವಾಗಿದೆ. ಮಂಡ್ಯದಲ್ಲಿ ಇಬ್ಬರೂ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಿದ್ದಾರೆ. ಸುಮಲತಾಗೆ ಯಶ್-ದರ್ಶನ್ ಸಾಥ್ ಕೊಟ್ಟಿದ್ದಕ್ಕೆ ಸಿಎಂ ಅವರಿಬ್ಬರು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು ಎಂದು ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯದಲ್ಲಿ ಟೀಕೆ-ಪ್ರತಿ ಟೀಕೆಗಳು ಜೋರಾಗಿದೆ. ಈ ಸಂದರ್ಭದಲ್ಲಿ ಸುಮಲತಾ ಹಾಕಿರುವ ಪೋಸ್ಟ್ ಗಮನ ಸೆಳೆದಿದೆ. 

ಸಿಎಂ ಮಾತಿಗೆ ಉತ್ತರವಾಗಿ ಈ ಪೋಸ್ಟ್ ಹಾಕಿದ್ದಾ? ಎನ್ನುವ ಪ್ರಶ್ನೆ ಎದ್ದಿದೆ.