ಕಾನ್ಪುರ[ಏ.21]: ನನ್ನನ್ನು ಇಂದಿರಾ ಗಾಂಧಿ ಜತೆಗೆ ಹೋಲಿಸಬೇಡಿ, ಆದರೆ ಅವರಂತೆ ಪರಿಶ್ರಮವಹಿಸಿ, ದೇಶಕ್ಕಾಗಿ ಸೇವೆ ಸಲ್ಲಿಸಲು ಬದ್ಧ ಎಂದು ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ನನ್ನನ್ನು ನನ್ನ ಕಾರ್ಯಕರ್ತರು ಇಂದಿರಾ ಜತೆಗೆ ಹೋಲಿಕೆ ಮಾಡುತ್ತಾರೆ. ಆದರೆ ಅವರ ಮುಂದೆ ನಾನೇನೂ ಅಲ್ಲ. ಆದಾಗ್ಯೂ ಅವರಿಟ್ಟಹೆಜ್ಜೆ ಗುರುತನ್ನು ಅನುಸರಿಸಿಕೊಂಡು ಹೋಗಲು ನಾನು ಮತ್ತು ನನ್ನ ಸಹೋದರ (ರಾಹುಲ್‌ ಗಾಂಧಿ) ಮುಂದಾಗುತ್ತೇವೆ ಎಂದರು.

ನೀವು ನಮಗೆ ಅವಕಾಶ ಕೊಟ್ಟರೂ, ಕೊಡದಿದ್ದರೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತೇವೆ ಎಂದರು.