ಮಂಡ್ಯ[ಮೇ. 18]  ಮಂಡ್ಯ ಎಲೆಕ್ಷನ್‌ನಲ್ಲಿ ಬಾಡೂಟ ಮತ್ತು ಎಣ್ಣೆಯ ಹೊಳೆ ಹರಿದಿರುವುದು ಇದೀಗ ಲೆಕ್ಕಕ್ಕೆ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲಿ ಹಣದ ಜೊತೆ ಎಣ್ಣೆಯ ಹೊಳೆ ಹರಿಸಿರುವುದು ಸಿಕ್ಕ ಮಾಹಿತಿಯಿಂದ ಪಕ್ಕಾ ಆಗಿದೆ.

ದಶಕಗಳ ಇತಿಹಾಸದಲ್ಲಿ ಈ ಬಾರಿ ದಾಖಲೆಯ ಮದ್ಯ ಮರಾಟವಾಗಿದೆ. 2019 ಫೆಬ್ರವರಿಯಲ್ಲಿ 44.61 ಲಕ್ಷ ಲೀಟರ್ ಮದ್ಯ ಮಾರಾಟವಾಗಿದ್ದರೆ, ಮಾರ್ಚ್ 2019ರಲ್ಲಿ 44.11 ಲಕ್ಷ ಲೀಟರ್ ಮದ್ಯ ಮರಾಟವಾಗಿದೆ. 2019ರ ಏಪ್ರಿಲ್‍ನಲ್ಲಿ ಅಂದ್ರೆ ಎಲೆಕ್ಷನ್ ಸಂಧರ್ಭದಲ್ಲಿ 46.36 ಲಕ್ಷ ಲೀಟರ್ ಮದ್ಯ ಮಾರಾಟವಾಗಿದ್ದು ದಾಖಲೆ ನಿರ್ಮಿಸಿದೆ.

ಇದರಲ್ಲಿ 180 ಎಂಎಲ್ ಇರುವ ಟ್ರೆಟ್ರಾ ಪ್ಯಾಕ್‍ಗಳೇ ಹೆಚ್ಚು ಮಾರಾಟವಾಗಿದೆ.  ಈ ಮೂಲಕ 14 ವರ್ಷದ ದಾಖಲೆಯನ್ನು ಈ ಬಾರಿಯ ಎಲೆಕ್ಷನ್ ಚಿಂದಿ ಉಡಾಯಿಸಿದೆ. ಅಭ್ಯರ್ಥಿಗಳು ಸಮಾವೇಶಕ್ಕೆ ಬಂದ ಕಾರ್ಯಕರ್ತರಿಗೆ  ಹಣದ ಜೊತೆ ಬಿರಿಯಾನಿ ಊಟ,ಮದ್ಯ ಹಂಚಿಕೆ‌ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಸುಮಾರು 34 ಲಕ್ಷ ಲೀಟರ್ ಮದ್ಯ ಮಾರಾಟವಾಗಿತ್ತು. ಆದರೆ ಒಂದು ವರ್ಷದಲ್ಲಿ ಎಂಥ ಬದಲಾವಣೆ!

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.