ಮೋದಿ ನಿತ್ಯ ಮುಖಕ್ಕೆ ವ್ಯಾಕ್ಸ್‌ ಮಾಡಿಸುತ್ತಾರೆ| ಮೋದಿ ಮುಖ ನೋಡಿ ಮತ ನೀಡಿ ಎಂದ ಶೋಭಾ, ನಳಿನ್ ಗೆ ತಿರುಗೇಟು

ಉಡುಪಿ[ಏ.08]: ಪ್ರಧಾನಿ ನರೇಂದ್ರ ಮೋದಿ ತಮ್ಮ ಜೊತೆಯಲ್ಲಿ ಮೇಕಪ್‌ ಮ್ಯಾನ್‌ನನ್ನು ಇಟ್ಟುಕೊಂಡು ಓಡಾಡುತ್ತಾರೆ. ನಿತ್ಯ ವ್ಯಾಕ್ಸ್‌ ಮಾಡಿಸಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಮುಖ ನೋಡಿ ಮತ ಹಾಕಬೇಡಿ. ಮೋದಿ ಮುಖ ನೋಡಿ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ತಮ್ಮ ಜೊತೆಯಲ್ಲಿ ಮೇಕಪ್‌ ಮ್ಯಾನ್‌ ಇಟ್ಟುಕೊಂಡು ಓಡಾಡುತ್ತಾರೆ. ಬೆಳಿಗ್ಗೆ ಎದ್ದು ವ್ಯಾಕ್ಸ್‌ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಅವರ ಮುಖ ಫಳಫಳ ಅನ್ನುತ್ತಿರುತ್ತದೆ ಅದಕ್ಕೆ ಅವರ ಮುಖ ನೋಡಿ ಮತ ಹಾಕಿ ಅಂತ ಹೇಳುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೇ ನಾವು ಒಂದು ದಿನ ಬೆಳಿಗ್ಗೆ ಸ್ನಾನ ಮಾಡಿದ್ರೆ ಬಿಸಿಲಲ್ಲಿ ಕೆಲಸ ಮಾಡಿ ಮರುದಿನಾನೇ ಸ್ನಾನ ಮಾಡೋದು. ಆದ್ದರಿಂದ ನಮ್ಮ ಮುಖ ಕಪ್ಪಾಗಿರುತ್ತದೆ. ಅದಕ್ಕೆ ಮತ ಹಾಕಬೇಡಿ ಅಂತ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿಡಂಬನೆ ಮಾಡಿದರು.