ಹಾವೇರಿ, [ಏ.20]: ಪ್ರಧಾನಿ ಮೋದಿ ಹಾಗೂ ಅವರ ಪತ್ನಿ ಬಗ್ಗೆ ಅವಹೇಳನಕಾರಿ ಹೇಳಿಕೆ  ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ದೂರು ನೀಡಿದೆ.

ಬಿಜೆಪಿಯವರು ಮೋದಿ ಮುಖ ನೋಡಿ ವೋಟು ಕೊಡಿ ಅಂತಿದಾರೆ. ಆದರೆ, ಮೋದಿ ಮುಖ ಸರಿಯಿಲ್ಲ ಎಂದು ಹೆಂಡತಿಯೇ ಬಿಟ್ಟು ಹೋಗಿದ್ದಾರೆ ಎಂದು ಹಾವೇರಿ ಇಂದು [ಶನಿವಾರ] ಲೋಕಸಭಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಬಿಜೆಪಿ ಮುಖಂಡ ಗುರುದತ್ತ ಹೆಗಡೆ ಅವರು ಜಿಲ್ಲಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುರುದತ್ತ ಹೆಗಡೆ, ಇಂತಹ ಹೇಳಿಕೆಯಿಂದ ಕೆಲ‌ನಿಮಿಷ ರಂಜಿಸಬಹುದು. ಆದರೆ ಜನರು ನಿಮ್ಮ ಸಂಸ್ಕೃತಿಯನ್ನ ಅರ್ಥ ಮಾಡಿಕೊಳ್ತಾರೆ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ಬಗ್ಗೆ ಹೇಳಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಯೋಗದವರು ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ ಎಂದು ಹೇಳಿದರು.