Asianet Suvarna News Asianet Suvarna News

ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದು ಹೇಗೆ..? ಮಂಜು ಸೋತಿದ್ದೆಲ್ಲಿ..?

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದಿದ್ದು ಹೇಗೆ..? ಎ ಮಂಜು ಯಡವಿದ್ದು ಎಲ್ಲಿ ಎನ್ನುವುದರ ವಿಶ್ಲೇಷಣೆಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

Hassan Loksabha Constituency election results 2019 5 reasons to win and loose
Author
Hassan, First Published May 23, 2019, 8:15 PM IST

ಹಾಸನ[ಮೇ.23]: ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರನ್ನು ಬರೋಬ್ಬರಿ 1,41,324 ಮತಗಳಿಂದ ಮಣಿಸಿದ ಪ್ರಜ್ವಲ್ ರೇವಣ್ಣ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲು ಸಜ್ಜಾಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಇದುವರೆಗೂ ಪ್ರತಿನಿಧಿಸುತ್ತಾ ಬಂದಿದ್ದ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿದ್ದರು. ಕಾಂಗ್ರೆಸ್ -ಜೆಡಿಎಸ್ ಲೋಕಸಭಾ ಮೈತ್ರಿ ವಿರೋಧಿಸಿ ಬಿಜೆಪಿ ಸೇರಿದ್ದ ಎ. ಮಂಜು ಸಾಕಷ್ಟು ಪೈಪೋಟಿ ನೀಡಿದರಾದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದಿದ್ದು ಹೇಗೆ..? ಎ ಮಂಜು ಯಡವಿದ್ದು ಎಲ್ಲಿ ಎನ್ನುವುದರ ವಿಶ್ಲೇಷಣೆಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಪ್ರಜ್ವಲ್ ರೇವಣ್ಣ ಗೆದ್ದಿದ್ದು ಹೇಗೆ..?

1. ದೇವೇಗೌಡರ ಮೊಮ್ಮಗ ಎಂಬ ಹೆಸರಿನ‌ ಬಲ

2. ವೈಷಮ್ಯ ಮರೆತು ಕೈ ನಾಯಕರ ಮನೆಬಾಗಿಲಿಗೆ ಹೋಗಿ ಪುತ್ರನ ಗೆಲುವಿಗೆ ಶ್ರಮಿಸಿದರ ರೇವಣ್ಣ, ವಿರೋಧಿ ಅಲೆ ಹೆಚ್ಚಾಗದಂತೆ ಮಾಡಿದ್ದು

3. ಜೆಡಿಎಸ್ ಬಹಳ ಬಲಿಷ್ಠ ಕ್ಷೇತ್ರಗಳಾದ ಹೊಳೆನರಸೀಪುರ ಹಾಗು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹೆಣೆದ ತಂತ್ರದ ಫಲವಾಗಿ ಈ ಎರಡೇ ವಿಧಾನಸಭಾ ಕ್ಷೇತ್ರದಲ್ಲಿಯೇ ಒಂದು ಲಕ್ಷ ಲೀಡ್

4. ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರಿಂದ ಇಡಿಗಂಟಾಗಿ ಬಂದ ಅಲ್ಪ ಸಂಖ್ಯಾತ ಹಾಗು ದಲಿತರ ಮತಗಳು

5. ಹಿಂದೆಂದಿಗಿಂತಲೂ ಹೆಚ್ಚು ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿ‌ ಗೆದ್ದು ಬೀಗಿದ ಜೆಡಿಎಸ್

ಎ. ಮಂಜು ಸೋತಿದ್ದೆಲ್ಲಿ..?  

1. ಕೈಕೊಟ್ಟ ದಲಿತ ಹಾಗು ಅಲ್ಪ ಸಂಖ್ಯಾತರು

2. ಸ್ಥಳೀಯವಾಗಿ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ‌ ಬರೀ ಜೆಡಿಎಸ್‌ ವಿರೋಧಿ ಮತಗಳನ್ನ‌ ನೆಚ್ಚಿಕೊಂಡಿದ್ದ ಎ. ಮಂಜು

3. ಮೋದಿ ಪ್ರಚಾರಕ್ಕೆ‌ ಆಗಮಿಸದಿದ್ದದ್ದರಿಂದ ತೀವ್ರ ನಿರಾಸೆ

4. ಮಂಜು ಪರವಾಗಿ ಪ್ರಚಾರಕ್ಕೆ ಬಾರದ ಬಿಜೆಪಿ ರಾಜ್ಯ ಹಾಗು ರಾಷ್ಟ್ರೀಯ ನಾಯಕರು

5. ಬಿಜೆಪಿಯಲ್ಲಿದ್ದುಕೊಂಡೇ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳಿಕೊಂಡಿದ್ದರಿಂದ ಕೈ ಹಿಡಿಯದ ಕಟ್ಟಾ ಕಮಲ‌ ಮತದಾರ

ಅಂಕಿಸಂಖ್ಯೆ: ಪಡೆದ ಮತಗಳು

ಪ್ರಜ್ವಲ್ ರೇವಣ್ಣ: 6,76,606
ಎ. ಮಂಜು: 5,35,282
ಪ್ರಜ್ವಲ್ ರೇವಣ್ಣ ಗೆಲುವಿನ ಅಂತರ: 1,41,324 ಮತಗಳು

ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಲೀಡ್..?

* ಕಡೂರು
JDS- 63,855
BJP- 75,874
BJP LEAD = 12,019
* ಬೇಲೂರು
JDS-71,500
BJP-64,465
JDS LEAD = 7,035

* ಚೆನ್ನರಾಯಪಟ್ಟಣ
JDS-94,299
BJP-55,144
JDS LEAD = 39,155

* ಹೊಳೆನರಸೀಪುರ
JDS-121082
BJP-46427
JDS LEAD- 74,655

* ಅರಕಲಗೋಡು
JDS- 85,860
BJP- 81,417
JDS LEAD =4,443

* ಸಕಲೇಶಪುರ
JDS- 73,170
BJP- 69,711
LEAD JDS = 3,459

* ಅರಸಿಕೆರೆ
JDS- 85,195
BJP- 74,765
LEAD JDS-10,430

* ಹಾಸನ
JDS-80,551
BJP-65,586
LEAD JDS = 14965
 

Follow Us:
Download App:
  • android
  • ios