ಹಾಸನ, (ಮಾ.23): ರೈತರ ಮಕ್ಕಳಾದ ಇವರಿಗೆ ಕೃಷಿ ಖಾತೆ ಬೇಡಾ, ತೋಟಗಾರಿಕೆ ಖಾತೆ ಬೇಡ. ಲೋಕೋಪಯೋಗಿ ಖಾತೆ,ಇಂಧನ ಖಾತೆಯೇ ಬೇಕು ಎಂದು ಪರೋಕ್ಷವಾಗಿ ಎಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ.

ಹಾಸನದಲ್ಲಿಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎ. ಮಂಜು, ಯಾವ ಖಾತೆಯಲ್ಲಿ ದುಡ್ಡಿದೆಯೋ ಅದೇ ಖಾತೆ ಬೇಕು ಅಂತಾರೆ ಎಂದು ಜೆಡಿಎಸ್ ನಾಯಕರ ವಿರುದ್ದ  ವಾಗ್ದಾಳಿ ನಡೆಸಿದರು.

ನಮ್ಮ ನಾಮ ಪತ್ರ ಸಲ್ಲಿಕೆ ಕಾರ್ಯಕ್ರಮ ಐತಿಹಾಸಿಕ ಆಗಬೇಕು. ಸುಮಲತಾ  ನಾಮಪತ್ರದಲ್ಲಿ ಆದಂತೆ ಆಗಬೇಕು. ಜೆಡಿಎಸ್ ನಾಮಪತ್ರ ಸಲ್ಲಿಕೆ ವೇಳೆ ಬಂದದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಎಂದು ಕಾರ್ಯಕರ್ತರಿಗೆ  ಕರೆ ನೀಡಿದರು.

ಇನ್ನು ನಾಮಪತ್ರ ಸಲ್ಲಿಕೆ ದಿನ ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಮಂಜು ತಿಳಿಸಿದರು.