ಹಾಸನ(ಮಾ.16): ಎ ಮಂಜು ಬಿಜೆಪಿ ಸೇರುವುದು ಖಚಿತವಾದ ಬೆನ್ನಲ್ಲೇ, ಹಾಸನ ಜಿಲ್ಲಾ ಬಿಜೆಪಿ ಘಟಕದಲ್ಲಿ ತಳಮಳ ಶುರುವಾಗಿದೆ.

ಎ ಮಂಜು ಬಿಜೆಪಿ ಸೇರ್ಪಡೆಗೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್, ಇದೀಗ ಎ ಮಂಜು ಬಿಜೆಪಿ ಸೇರೋದು ಖಚಿತವಾಗುತ್ತಲೇ ಮೌನಕ್ಕೆ ಶರಣಾಗಿದ್ದಾರೆ.

ಕಳೆದ ವಿಧಾಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗಾ ರಮೇಶ್, ಎ ಮಂಜು ಬಿಜೆಪಿ ಸೇರ್ಪಡೆ ವಿರೋಧಿಸಿ ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಲ್ಲದೇ ಎ ಮಂಜು ಬಿಜೆಪಿ ಸೇರ್ಪಡೆಯನ್ನು  ಕೆಲವು ಸ್ಥಳೀಯ ನಾಯಕರು ವಿರೋಧಿಸುತ್ತಿದ್ದು, ಯೋಗಾ ರಮೇಶ್ ರಾಜೀನಾಮೆ ನೀಡಿದರೆ ಅವರೂ ಕೂಡ ಪಕ್ಷ ತ್ಯಜಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.