ನವದೆಹಲಿ(ಮಾ.19): ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನ ಮುಂದೆ #ಚೌಕಿದಾರ್ ಎಂದು ಇದಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಇದೀಗ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಹರಿಯಾಣದ ಸಚಿವ ಅನಿಲ್ ವಿಜ್, ನೀವು ಬೇಕಾದರೆ ನಿಮ್ಮ ಹೆಸರಿನ ಮುಂದೆ #ಪಪ್ಪು ಎಂದು ಬರೆದುಕೊಳ್ಳಿ ಎಂದು ಕುಹುಕವಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅನಿಲ್ ವಿಜ್, ಬಿಜೆಪಿ ನಾಯಕರು ತಮ್ಮ ಹೆಸರಿನ ಮುಂದೆ #ಚೌಕಿದಾರ್ ಎಂದು ಬರೆದುಕೊಂಡರೆ ಕಾಂಗ್ರೆಸ್‌ಗೆ ಚಿಂತೆ ಏಕೆ ಎಂದು ಪ್ರಶ್ನಿಸಿದ್ದಾರೆ.

ನಿಮಗೂ ಹೆಸರಿನ ಮುಂದೆ ಏನಾದರೂ ಸೇರಿಸಿಕೊಳ್ಳಬೇಕು ಎಂದು ಬಯಕೆಯಾಗಿದ್ದರೆ #ಪಪ್ಪು ಎಂದು ಸೇರಿಸಿಕೊಳ್ಳಿ ಎಂದು ಅನಿಲ್ ವಿಜ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ #MainBhiChowkidar ಅಭಿಯಾನ ಆರಂಭಿಸಿದ ಬಳಿಕ ಪ್ರಧಾನಿಯೂ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಟ್ವಿಟ್ಟರ್‌ನಲ್ಲಿ ತಮ್ಮ ಹೆಸರಿನ ಮುಂದೆ #Chwikidar ಎಂದು ಬರೆದುಕೊಂಡಿದ್ದಾರೆ.