ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಇದೀಗ ಬಲ ಬಂದಿದೆ. ನಿವೃತ್ತ ಸೇನಾಧಿಕಾರಿಯೋರ್ವರು ಪಕ್ಷ ಸೇರ್ಪಡೆಯಾಗಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಇನ್ನಷ್ಟು ಭಲ ಸೇರ್ಪಡೆಯಾಗಿದೆ.

ಸೇನಾ ಪಡೆ ಮಾಜಿ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನಂಟ್ ಜನರಲ್ ಶರತ್ ಚಂದ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. 

ಕಳೆದ ವರ್ಷ ಸೇನಾವೃತ್ತಿಯಿಂದ ನಿವೃತ್ತರಾಗಿದ್ದ ಶರತ್ ಚಂದ್ ಇದೀಗ ರಾಜಕೀಯಕ್ಕೆ ಅಂಗಳಕ್ಕೆ ಇಳಿದಿದ್ದಾರೆ. 

ಈ ವೇಳೆ ಮಾತನಾಡಿದ ಅವರು ಪ್ರಧಾನಿ ಮೋದಿ ನಾಯಕತ್ವದಿಂದ ಪ್ರಭಾವಿತವಾಗಿ ಪಕ್ಷ ಸೇರಿದ್ದಾಗಿ ಹೇಳಿದ್ದಾರೆ. 

ಬಿಜೆಪಿ ಸೇರ್ಪಡೆಯಾಗುತ್ತಿರುವವರ ಸಾಲಿಗೆ ಇದೀಗ ನಿವೃತ್ತ ಸೇನಾಧಿಕಾರಿಯೂ ಸೇರಿದಂತಾಗಿದೆ.