ಮಮತಾ ಆಪ್ತ ಮಾಜಿ ಐಪಿಎಸ್ ಅಧಿಕಾರಿ ಬಿಜೆಪಿಗೆ| ಪ.ಬಂಗಾಳದ ಘಟಾಲ್ ಕ್ಷೇತ್ರದಿಂದ ಭಾರತಿ ಘೋಷ್ ಕಣಕ್ಕೆ | ಮಾವೋವಾದಿಗಳ ಹುಟ್ಟಡಗಿಸಿದ್ದ ದಿಟ್ಟ ಐಪಿಎಸ್ ಅಧಿಕಾರಿ|

ಕೋಲ್ಕತ್ತಾ(ಮಾ.22): ಪ.ಬಂಗಾಳದಲ್ಲಿ ಮಾವೋವಾದಿಗಳ ಹುಟ್ಟಡಗಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರಿಗೆ ಬಿಜೆಪಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ.

ಹಿಂದೊಮ್ಮೆ ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಭಾರತಿ, ಮಮತಾ ಕಾರ್ಯವೈಖರಿಗೆ ಬೇಸತ್ತು ಸ್ವಯಂ ನಿವೃತ್ತಿ ಪಡೆದಿದ್ದರು.

ಇದೀಗ ರಾಜ್ಯದ ಘಟಾಲ್‌ ಕ್ಷೇತ್ರದಿಂದ ಭಾರತಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದ್ದು, ಮಾಜಿ ಐಪಿಎಸ್ ಅಧಿಕಾರಿಣಿ ವಿರುದ್ಧ ಟಿಎಂಸಿಯಿಂದ ಚಿತ್ರ ನಟ ದೀಪಕ್‌ ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ.