ಬೆಳಗಾವಿ, (ಏ.20): ಬಿಜೆಪಿಯವರಿಗೆ ಹೊಡಿ, ಬಡಿ, ಕಡಿ, ಕೊಲೆ ಮಾಡುವುದನ್ನು ಬಿಟ್ರೆ ಬೇರೆ ಏನು ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ' ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲಾ. ಬಿಜೆಪಿಯವರಿಗೆ ಹೊಡಿ, ಬಡಿ,ಕಡಿ ಕೊಲೆ ಮಾಡುವುದನ್ನ ಬಿಟ್ಟಬಿಟ್ಟರೆ ಏನು ಗೊತ್ತಿಲ್ಲ ಎಂದು ಕಿಡಿಕಾರಿದರು

ಕೊಪ್ಪಳದಲ್ಲಿ ಸಿದ್ದರಾಮಯ್ಯ ಆತ್ಮವಿದೆ ಎನ್ನುವ ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಅವರು ಸೋಲ್ತಿವಿ ಅಂತಾ ಹತಾಶೆಯಿಂದ ಏನೇನೋ ಮಾತಾಡ್ತಾರೆ. ನನ್ನ ಆತ್ಮ ಎಲ್ಲಾಕಡೆ ಇದೇ. ನನ್ನದು ಒಂದೇ ಆತ್ಮ ನನ್ನಲ್ಲಿಯೇ ಇದೆ ಎಂದು ತಿರುಗೇಟು ನೀಡದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.