ಪ್ರಭುಸ್ವಾಮಿ ನಟೇಕರ್, ಕನ್ನಡಪ್ರಭ

ಬೆಂಗಳೂರು[ಏ.01]: ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತದ ಲೋಕ ಸಭೆ ಚುನಾವಣೆಗೆ ಇದೇ ಮೊದಲ ಬಾರಿಗೆ ಬ್ಯಾಂಕ್, ಆದಾಯ ತೆರಿಗೆ ಮತ್ತು ಸುಂಕ ಇಲಾಖೆಯ ಸಿಬ್ಬಂದಿಯನ್ನು ಚುನಾವಣೆ ಆಯೋಗವು ಮತಗಟ್ಟೆಗಳಲ್ಲಿ ಬಳಕೆ ಮಾಡಿ ಕೊಳ್ಳಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಇತ್ತೀಚೆಗಿನ ವರ್ಷದಲ್ಲಿ ಚುನಾವಣಾ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿ ಅಗತ್ಯತೆ ಇರುವ ಕಾರಣ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಪಡೆದುಕೊಳ್ಳಲು ತೀಮಾನಿಸಿ ಕ್ರಮ ಕೈಗೊಳ್ಳ ಲಾಗಿದೆ. ಬ್ಯಾಂಕ್, ಆದಾಯ ತೆರಿಗೆ ಮತ್ತು ಸುಂಕ ಇಲಾಖೆಗಳ ಪ್ರತಿ ಶಾಖೆಯಿಂದ ಕನಿಷ್ಠ ಇಬ್ಬರು, ಗರಿಷ್ಠ ಐದು ಮಂದಿಯಂತೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ತರಬೇತಿ ಕಾರ್ಯವನ್ನು ಸಹ ಆಯೋಜಿಸಲಾ ಗುತ್ತಿದ್ದು, ತರಬೇತಿ ನೀಡಿ ಕಾರ್ಯಕ್ಕೆ ಸಜ್ಜುಗೊಳಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿ

ಪ್ರತಿ ಚುನಾವಣೆ ವೇಳೆ ಆಯಾ ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸ ಲಾಗುತ್ತದೆ. ಚುನಾವಣಾ ಕಾರ್ಯದ ವೇಳೆ ವೈಯಕ್ತಿಕ ಕಾರಣ, ಆರೋಗ್ಯ ಕಾರಣ ನೀಡಿ ತಪ್ಪಿಸಿಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿದೆ ಮತ್ತು ಚುನಾವಣಾ ಕಾರ್ಯದ ಒತ್ತಡವು ಅಧಿಕವಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಿಕೊಂಡು ಕರ್ತವ್ಯ ನಿಭಾಯಿಸಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಲೋಕ ಸಭೆ ಚುನಾವಣೆಗೆ ಇದೇ ಮೊದಲ ಬಾರಿಗೆ ಕೇಂದ್ರ ಸಿಬ್ಬಂದಿಯನ್ನು ಸಹ ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗುತ್ತಿದೆ.

ಬ್ಯಾಂಕ್, ಆದಾಯ ತೆರಿಗೆ ಮತ್ತು ಸುಂಕ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಹೆಚ್ಚಾಗಿ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ಎಚ್ಚರಿಕೆ ವಹಿಸಬೇಕು. ಇತರೆ ಮೇಲ್ವಿಚಾರಣೆ ಕೆಲಸಗಳಿಗೆ ನಿಯೋಜಿಸಲಾ ಗುತ್ತದೆ. ಪಾರದರ್ಶಕತೆ ಮತ್ತು ಮುಕ್ತ ಚುನಾವಣೆಗೆ ಇದು ಸಹಕಾರಿ ಯಾಗಲಿದೆ ಎಂದು ಆಯೋಗದ ಮೂಲಗಳು ಹೇಳಿವೆ

ಚುನಾವಣೆ ಕಾರ್ಯಕ್ಕೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆ ಸಿಬ್ಬಂದಿ ಬಳಸಿಕೊಳ್ಳುವುದು ಸಹಜ. ಪ್ರತಿಯೊಂದು ಕೆಲಸಕ್ಕೂ ರಾಜ್ಯ ಸರ್ಕಾರದ ಸಿಬ್ಬಂದಿಯನ್ನೇ ಅವಲಂಬಿಸಬೇ ಕಾಗಿದ್ದರಿಂದ ಅವರ ಮೇಲೆ ಒತ್ತಡ ಹೆಚ್ಚಾ ಗುತ್ತಿತ್ತು. ಅಂತಿಮ ಗಳಿಗೆಯಲ್ಲಿ ಅನಾರೋ ಗ್ಯ ಸೇರಿದಂತೆ ಇತರೆ ಕಾರಣಗಳಿಂದ ಚುನಾವಣಾ ಕಾರ್ಯದಲ್ಲಿ ದೂರ ಉಳಿಯು ವ ಸಾಧ್ಯತೆ ಇದೆ. ನಿಖರವಾದ ಕಾರಣವಿದ್ದರೆ ಚುನಾವಣಾ ಕಾರ್ಯದಿಂದ ವಿನಾಯಿತಿ ಯನ್ನು ಸಹ ನೀಡಬೇಕಾಗುತ್ತದೆ. ಅದರಲ್ಲಿ ಯೂ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಯಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ. ಆಗ ಕೇಂದ್ರ ಸರ್ಕಾರದ ಸಿಬ್ಬಂದಿ ಸಹಕಾರವು ಮಹತ್ವದಾಗಿರುತ್ತದೆ.

ಅಲ್ಲದೇ, ಇತ್ತೀಚೆಗೆ ಕಾನೂನಿನಲ್ಲಿ ಯೂ ಕೇಂದ್ರ ಸಿಬ್ಬಂದಿಯ ಬಳಕೆಯ ಕುರಿತು ಪ್ರಸ್ತಾಪಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕೇಂದ್ರ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿ ಸಲಾಗುತ್ತದೆ ಎಂದು ಹೇಳಲಾಗಿದೆ.

ಬ್ಯಾಂಕ್, ಐಟಿ ಸಿಬ್ಬಂದಿ ಅಳಲು

ಹಣಕಾಸು ವರ್ಷದ ಮುಕ್ತಾಯದ ಅವಧಿ ಇರುವ ಕಾರಣ ಬ್ಯಾಂಕ್ ಸಿಬ್ಬಂದಿಗೆ ಹೆಚ್ಚುವರಿ ಕೆಲಸದ ನಡುವೆಯೂ ಚುನಾವಣಾ ಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ. ವರ್ಷದ ಹಣಕಾಸು ವಹಿವಾಟಿನ ಕುರಿತು ಸಮರ್ಪಕ ಮಾಹಿತಿ ಕ್ರೋಢೀಕರಿಸುವ ಕಾರ್ಯ ಈಗಾಗಲೇ ಶುರುವಾಗಿದೆ. ಇದರ ನಡುವೆ ಚುನಾವಣೆ ಕೆಲಸವು ಮತ್ತಷ್ಟು ಒತ್ತಡ ತಂದಿದೆ. ಆದರೂ ಅನಿವಾರ್ಯವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಕೆಲವು ಬ್ಯಾಂಕ್ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.