ನಾಮಪತ್ರ ಸಲ್ಲಿಕೆ ದಿನವೇ 'ಸಿಂಹ'ಗೆ ಆಘಾತ
ನಾಮಪತ್ರ ಸಲ್ಲಿಕೆ ದಿನವೇ ಮೈಸೂರು ಹಾಲಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ದೂರು ದಾಖಲಾಗಿದೆ.
ಮೈಸೂರು, (ಮಾ.25): ಮೈಸೂರು-ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಸಹಸ್ರಾರು ಬೆಂಬಲಿಗರೊಂದಿಗೆ ಇಂದು (ಸೋಮವಾರ) ನಾಮಪತ್ರ ಸಲ್ಲಿಸಿದರು.
ಆದ್ರೆ, ನಾಮಪತ್ರ ಸಲ್ಲಿಕೆ ದಿನವೇ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸರ್ಕಾರಿ ಅಂಚೆ ಕಚೇರಿ ಮೂಲಕ ಬುಕ್ಲೆಟ್ಗಳನ್ನು ಹಂಚಿದ್ದಾರೆ ಎಂದು ಆರೋಪಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗಿದೆ.
ಚುನಾವಣಾಧಿಕಾರಿಗಳ ಆದೇಶದಂತೆ ಫ್ಲೈಯಿಂಗ್ ಸ್ಕ್ವಾಡ್ ಸಹಾಯಕ ಚುನಾವಣಾಧಿಕಾರಿ ಉಮೇಶ್ ಅವರು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭಾರೀ ಜನ ಬೆಂಬಲದೊಂದಿಗೆ ಮೈಸೂರು ’ಸಿಂಹ’ ನಾಮಪತ್ರ ಸಲ್ಲಿಕೆ
ಕೆ.ಎಸ್.ಓ.ಯು.ವ್ಯವಸ್ಥಾಪನಾ ಮಂಡಳಿ ಮಾಜಿ ಎಸ್. ಶಿವರಾಮ್ ನೀಡಿದ ದೂರಿನ ಅನ್ವಯ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಎಫ್‌ಐಆರ್ ದಾಖಲಿಸಲು ಸೂಚಿಸಿದ್ದಾರೆ.
ಬುಕ್ಲೆಟ್ಗಳಲ್ಲಿ ಪ್ರಚಾರಕರ ಹಾಗೂ ಮುದ್ರಕರ ವಿವರ ಇಲ್ಲದ ಹಿನ್ನೆಲೆ ಚುನಾವಣಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ..