ಪಟನಾ[ಏ.26]: ನಿಮ್ಮ ಇಷ್ಟದಂತೆ ನಿಮ್ಮ ಗಂಡ ಮತ ಹಾಕಿದರೆ, ಆತನಿಗೆ ಊಟ ಕೊಡಿ, ಇಲ್ಲದೇ ಹೋದಲ್ಲಿ ಉಪವಾಸ ಇರುವಂತೆ ಮಾಡಿ ಎಂದೆನ್ನುವ ಮೂಲಕ ಬಿಹಾರ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ ಮಹಿಳೆಯರಿಗೆ ವಿಚಿತ್ರವಾದ ಸಲಹೆ ನೀಡಿದ್ದಾರೆ.

ಮಧುಬನಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಮಾತನಾಡಿದ ಅವರು, ನಿಮ್ಮ ಮನೆಯ ಪುರುಷರೆಲ್ಲ ನಿಮ್ಮ ಇಷ್ಟದಂತೆ ಮತ ಚಲಾಯಿಸಬೇಕು. ಆಗ ಊಟ ಕೊಡಿ ಸಾಧ್ಯವಾದರೆ ಪ್ರೀತಿಯಿಂದ ನೀವೇ ಊಟ ಮಾಡಿಸಿ. ಇಲ್ಲದೇ ಹೋದಲ್ಲಿ ಇಡೀ ದಿನ ಉಪವಾಸ ಇರುವಂತೆ ಮಾಡಿ ಎಂದಿದ್ದಾರೆ.

ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿರುವ ನಿತೀಶ್‌, ಶಾಲಾ ಬಾಲಕಿಯರಿಗೆ ಸೈಕಲ್‌ ಯೋಜನೆ ಆರಂಭಿಸಿದ್ದಾರೆ. ಜತೆಗೆ ಸಾರಾಯಿ ನಿಷೇಧ, ಸಿಎಂ ನ್ಯಾಪಕಿನ್‌ ಯೋಜನೆ, ಕನ್ಯಾ ವಿಕಾಸ ಯೋಜನೆ ಜಾರಿಗೊಳಿಸಿದ್ದಾರೆ.