Asianet Suvarna News Asianet Suvarna News

ಶಿವಮೊಗ್ಗ ಮೈತ್ರಿ ಅಭ್ಯರ್ಥಿಗೆ ಶಾಕ್ : ಬಿಜೆಪಿಗೆ ಬೆಂಬಲ ನೀಡಿದ ನಾಯಕ

ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಇಬ್ಬರು ಮಾಜಿ ಸಿಎಂಗಳ ಹಣಾಹಣಿ ನಡೆಯುತ್ತಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರದ ಬಿಸಿ ಏರುತ್ತಿದೆ. ಇದೇ ವೇಳೆ ನಾಯಕರೋರ್ವರು ಬಿಜೆಪಿ ಪಾಳಯಕ್ಕೆ ಬೆಂಬಲ ನೀಡಿದ್ದಾರೆ. 

Farmer leader supports BJP in Shivamogga shock to Cong JDS allaince candidate Madhu Bangarappa
Author
Bengaluru, First Published Apr 21, 2019, 11:36 AM IST

ಶಿವಮೊಗ್ಗ : ಲೋಕಸಭಾ ಚುನಾವಣಾ ಕಣ ರಂಗೇರುತ್ತಿರುವ ಈ ಸಂದರ್ಭದಲ್ಲಿ ಇತ್ತ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ಬಿರುಸಿನಿಂದ ಸಾಗಿದೆ. ಅಭ್ಯರ್ಥಿಗಳ ಪರವಾಗಿ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. 

ಇದೇ ವೇಳೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ HR ಬಸವರಾಜಪ್ಪ ಅವರನ್ನು ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಬೆಂಬಲ ಕೋರಿದ್ದು, ಬೆಂಬಲ ಸೂಚಿಸಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮೈತ್ರಿ ಆಭ್ಯರ್ಥಿ ಮಧು ಬಂಗಾರಪ್ಪ ಬಸವರಾಜಪ್ಪ  ಭೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ ಮೈತ್ರಿ ಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಲು ಸಮಯ ಕೇಳಿದ್ದರು. ಆದರೆ ಇದೀಗ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. 

ಭದ್ರಾವತಿ ತಾಲ್ಲೂಕಿನ ಹನುಮಂತಾಪುರದಲ್ಲಿನ  ನಿವಾಸದಲ್ಲಿ ಭೇಟಿ ಮಾಡಿದ್ದು, ಬಸವರಾಜಪ್ಪ ಬೆಂಬಲ ನೀಡುತ್ತಿರುವುದಾಗಿ ಬಿಎಸ್ ವೈ ಘೋಷಿಸಿದ್ದಾರೆ. 

ಈ ಮೂಲಕ ರೈತ ನಾಯಕ ಬಸವರಾಜಪ್ಪ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಶಾಕ್ ನೀಡಿದ್ದಾರೆ.

Follow Us:
Download App:
  • android
  • ios