ನವದೆಹಲಿ[ಮೇ.20]: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿಕೊಂಡಿರುವ ಭಾರತದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಮೇ 23ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಇಡೀ ದೇಶವೇ ಇದಕ್ಕಗಿ ಕಾತುರದಿಂದ ಕಾಯುತ್ತಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆ ವರದಿ ಬಹಿರಂಗಗೊಂಡಿದ್ದು, NDA ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಸಮೀಕ್ಷೆಗಳು ಪ್ರಕಟವಾದ ಬೆನ್ನಲ್ಲೇ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷಕ್ಕೆ ಶುಭ ಕೋರಿದ್ದಾರೆ ಹಾಗೂ ಭಾರತದೊಂದಿಗೆ ಉತ್ತಮ ಭಾಂಧವ್ಯ ಮುಂದುವರೆಸುವ ಭರವಸೆ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಸಮೀಕ್ಷೆಗಳಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೇರುವ ಸಂಕೇತ ಲಭ್ಯವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಮೊಹಮ್ಮದ್ ನಶೀದ್ 'ಭಾರತದಲ್ಲಿ ಚುನಾವಣೆ ಮುಕ್ತಾಯಗೊಂಡಿದೆ. ಇದರೊಂದಿಗೆ ಮೋದಿ ಹಾಗೂ ಬಿಜೆಪಿಗೆ ನನ್ನ ಶುಭಾಶಯಗಳು. ಮಾಲ್ಡೀವ್ಸ್ ಜನತೆ ಹಾಗೂ ಇಲ್ಲಿನ ಸರ್ಕಾರ, ಪ್ರಧಾನಿ ಹಾಗೂ ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಉತ್ತಮ ಭಾಂದವ್ಯ ಮುಂದುವರೆಸುತ್ತಾರೆಂಬ ವಿಶ್ವಾಸ ನನಗಿದೆ' ಎಂದಿದ್ದಾರೆ.

ಭಾರತದ 543 ಲೋಕಸಭಾ ಕ್ಷೇತ್ರಗಳಲ್ಲಿ 542 ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಮುಗಿದಿದೆ. ತಮಿಳುನಾಡಿನ ವೆಲ್ಲೋರ್ ಕ್ಷೇತ್ರದಲ್ಲಿ ಆಯೋಗವು ಚುನಾವಣೆ ರದ್ದುಗೊಳಿಸಿದೆ. ಈ ಚುನಾವಣೆಯ ಫಲಿತಾಂಶ 23ರಂದು ಪ್ರಕಟಗೊಳ್ಳಲಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, NDA ಮತ್ತೊಮ್ಮೆ ಅಧಿಒಕಾರಕ್ಕೇರುವ ಭವಿಷ್ಯ ನುಡಿದಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.