ಬೆಂಗಳೂರು[ಮೇ. 22]  50 ವರ್ಷ ಕಾಲ ವಿಪಕ್ಷದ ಸ್ಥಾನದಲ್ಲಿ ಇದ್ದರೂ ಚುನಾವಣಾ ಆಯೋಗ ಮತ್ತು ಇವಿಎಂ ಬಗ್ಗೆ ಬಿಜೆಪಿ ಒಂದೇ ಒಂದು ದೂರು ಕೊಟ್ಟಿಲ್ಲ ಎಂಬ ಮಾತನ್ನು ಬಿಜೆಪಿ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಕಾಂಗ್ರೆಸ್ ಗಿಂತ ಮುನ್ನವೇ ಅನುಮಾನ ವ್ಯಕ್ತಪಡಿಸಿದ್ದು ಬಿಜೆಪಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅದಕ್ಕೆ ದಾಖಲೆಯನ್ನು ನೀಡಿದ್ದಾರೆ. ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಬಿಜೆಪಿ.‌ ಆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್ ಈ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ಆ ಅನುಮಾನವನ್ನು ಬೆಂಬಲಿಸಿ ಎಲ್.ಕೆ.ಅಡ್ವಾಣಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. 'ಇವಿಎಂ' ಬಗ್ಗೆ ಈ ಹತ್ತು ವರ್ಷಗಳಲ್ಲಿ ಬಿಜೆಪಿಯ ಬದಲಾದ ನಿಲುವಿಗೆ ಕಾರಣವೇನು? ಎಂದು ಸಿದ್ದರಾಮಯ್ಯ ಪ್ರಶ್ನೆ ಎಸೆದಿದ್ದಾರೆ.

ಒಟ್ಟಿನಲ್ಲಿ ಸುಮಾರು ಒಂದೂವರೆ ತಿಂಗಳು ಕಾಲ ದೇಶಾದ್ಯಂತ ನಡೆದ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.