ದೇಶದಲ್ಲಿ ಇಂದು ಲೋಕಸಭೆ ಚುನಾವಣೆಗೆ ಮೂರನೇ ಹಂತದ ಮತದಾನ| 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳು| ಇದುವರೆಗೂ ಸುಮಾರು ಶೇ. 37ರಷ್ಟು ಮತದಾನ| ಕೇಂದ್ರ ಚುನಾವಣಾ ಆಯೋಗದ ಮಾಹಿತಿ|
ನವದೆಹಲಿ(ಏ.23): ದೇಶದಲ್ಲಿ ಇಂದು ಲೋಕಸಭೆ ಚುನಾವಣೆಗೆ ಮೂರನೇ ಹಂತದ ಮತದಾನ ಪ್ರಕ್ರಿಯೆ ಚಾಲನೆಯಲ್ಲಿದೆ. 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
Scroll to load tweet…
ಇದುವರೆಗೂ ಸುಮಾರು ಶೇ. 37ರಷ್ಟು ಮತದಾನವಾಗಿದ್ದು, ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಅದರಂತೆ ಒಟ್ಟು 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶೇಕಡಾವಾರು ಮತದಾನದತ್ತ ಗಮನಹರಿಸುವುದಾದರೆ...
ಅಸ್ಸಾಂ-ಶೇ.46.61
ಬಿಹಾರ-ಶೇ.37.05
ಛತ್ತೀಸ್ ಗಡ್-ಶೇ.42.95
ದಾದರ್ ಮತ್ತು ನಗರಹವೇಲಿ-ಶೇ.37.20
ದಮನ್ ಮತ್ತು ದಿಯು-ಶೇ.42.99
ಗೋವಾ-ಶೇ.45.72
ಗುಜರಾತ್-ಶೇ.39.36
ಜಮ್ಮು ಮತ್ತು ಕಾಶ್ಮೀರ-ಶೇ.9.63
ಕರ್ನಾಟಕ-ಶೇ.36.73
ಕೇರಳ-ಶೇ.39.60
ಮಹಾರಾಷ್ಟ್ರ-ಶೇ.31.99
ಒಡಿಶಾ-ಶೇ.32.82
ತ್ರಿಪುರ-ಶೇ.44.64
ಉತ್ತರಪ್ರದೇಶ-ಶೇ.29.76
ಪ.ಬಂಗಾಳ-ಶೇ.52.37
