ಮಂಡ್ಯ, [ಮಾ.26]: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಮೂರು ದೂರುಗಳು ದಾಖಲಾಗಿವೆ.

ಇದು ಊಹೆಗೆ ಮೀರಿದ್ದು! ರೆಬೆಲ್ ಸುಮಲತಾಗೆ ಮಂಡ್ಯ ಕಣದಲ್ಲಿ ಶಾಕ್

ಮೊನ್ನೆ ನಡೆದ ನಿಖಿಲ್ ನಾಮಪತ್ರ ಕಾರ್ಯಕ್ರಮದ ವಿರುದ್ಧ ಮಂಡ್ಯದ ಪಶ್ಚಿಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 1) ಬಹಿರಂಗ ಸಮಾವೇಶ ನಡೆದ ಕಾವೇರಿ ಪಾರ್ಕ್ ಹಾಳಾಗಿರುವ ಬಗ್ಗೆ, 2)ರ‍್ಯಾಲಿ ವೇಳೆ ಹಸಿರು ಬಣ್ಣದ ಸಿಡಿಮದ್ದು ಸ್ಪೋಟಿಸಿದ ಬಗ್ಗೆ 3)ರ್ಯಾಲಿಯಿಂದ ಟ್ರಾಫಿಕ್ ಜಾಮ್ ಉಂಟಾದ ಬಗ್ಗೆ ಸಹಾಯಕ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಚಿಹ್ನೆ ಆಯ್ಕೆಯಲ್ಲೂ ಜೆಡಿಎಸ್‌ಗೆ ಟಕ್ಕರ್ ಕೊಟ್ಟ ಸುಮಲತಾ ಅಂಬರೀಶ್..!

ಈ ರೀತಿ ಮೂರು ದೂರುಗಳನ್ನ ನೀಡಿ, ತನಿಖೆ ಮಾಡುವಂತೆ ಮಂಡ್ಯದ ಪಶ್ಚಿಮ ಪೋಲಿಸ್ ಠಾಣೆ ಪೊಲೀಸರಿಗೆ ಸಹಾಯಕ ಚುನಾವಣಾ ಅಧಿಕಾರಿಗಳ ಸೂಚನೆ ನೀಡಿದ್ದಾರೆ.

ನಿನ್ನೆ [ಸೋಮವಾರ] ಮಂಡ್ಯ ಜಿಲ್ಲಾಧಿಕಾರಿ ಕಚೇರಿಯವರೆಗೂ ರೋಡ್‌ ಶೋ ನಡೆಸಿ, ನಾಮಪತ್ರ ಸಲ್ಲಿಸಿದ್ದರು.ಈ ವೇಳೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರಿಂದ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದ್ರಿಂದ ವಾಹನ ಸವಾರರಿಗೆ ತೊಂದರೆಯಾಗಿತ್ತು.